ಬೆಳಗಾವಿ – ಬೆಳಗಾವಿ ಜಿಲ್ಲೆಯ ರೈತರ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಜಿಲ್ಲಾ ಹಾಗೂ ತಾಲೂಕುಗಳ ಅಧ್ಯಕ್ಷರ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ರಂಗರಾಜನ್ ಸಮಿತಿ ವರದಿಯ ಪ್ರಕಾರ ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ.೭೦ ರೈತರಿಗೆ ನೀಡಬೇಕು, ಕಬ್ಬಿನ ತೂಕದಲ್ಲಿನ ಮೋಸ ತಡೆ, ಪ್ರತಿ ಟನ್ ಕಬ್ಬಿಗೆ ರೂ.೧೦೦೦ ಪ್ರೋತ್ಸಾಹ ಧನ, ಗೋವಿನ ಜೋಳ ಖರೀದಿ ಕೇಂದ್ರ ಸ್ಥಾಪನೆ, ಬೆಳೆ ವಿಮಾ ಪರಿಹಾರದಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಸಬೇಕು, ಪಂಚಾಯಿತಿಗಳಲ್ಲಿ ಇ ಖಾತಾ ನೀಡಲು ವಿಳಂಬ ಮಾಡಿದವರ ಮೇಲೆ ಕ್ರಮ, ಕಳಸಾ ಬಂಡೂರಿ ಯೋಜನೆ ಪೂರ್ಣಗೊಳಿಸುವುದು, ಶ್ರೀ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣ, ರಾಯಬಾಗದಲ್ಲಿ ಎಪಿಎಂಸಿ ಸ್ಥಾಪನೆ….ಇವೇ ಮುಂತಾದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹ್ಮದ ರೋಷನ್ ಅವರು ಬೇಡಿಕೆಗಳ ಈಡೇರಿಕೆಯ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷರಾದ ವಿವೇಕ ಮೋರೆ, ಅಶೋಕ ಗುಡೋಡಗಿ ಚಿಕ್ಕೋಡಿ, ಜಿಲ್ಲಾ ಕಬ್ಬು ಬೆಳೆಗಾರರ ಆಯಾಮ ಪ್ರಮುಖರು,, ಜಯಪಾಲ ನಾಗನೂರ, ಮೂಡಲಗಿ ತಾಲೂಕಾ ಅಧ್ಯಕ್ಷ ಉಮೇಶ ಬೆಳಕೂಡ, ಬಸಪ್ಪ ಕವಲಾಪೂರ ಕೊಳವಿ, ಶಿವಕುಮಾರಗಾಣಿಗೇರ, ಸವದತ್ತಿ, ಧೀರೇಂದ್ರ ಕುಲಕರ್ಣಿ, ಚಿಕ್ಕ ಮುನವಳ್ಳಿ, ಮಹೇಶ ಪಾಟೀಲ ರಾಯಬಾಗ ತಾಲೂಕಾ ಅಧ್ಯಕ್ಷರು, ಜಗದೀಶ ಹಿರೇಮಠ, ಸವದತ್ತಿ, ಮಲ್ಲಪ್ಪ ಹೆಬ್ಬಳ್ಳಿ, ಅಶೋಕ ಸೋಕಿನ, ಖೋದಾನಪೂರ, ಸುರೇಶ ನಂದೆಪ್ಪನವರ, ರಾಮದುರ್ಗ ತಾಲೂಕಾ ಅಧ್ಯಕ್ಷರು, ಪವನಕುಮಾರ ಅಂಗಡಿ, ರಾಮದುರ್ಗ ತಾಲೂಕಾ ಕಾರ್ಯದರ್ಶಿ, ಶ್ರೀನಿವಾಸ ದ್ಯಾವನ್ನವರ, ರಾಮದುರ್ಗ, ಸುಮಿತ್ರಾ ಹಣಮನೇರಿ, ರಾಮದುರ್ಗ, ಅಪ್ಪಣ್ಣಗೌಡಾ ಪಾಟೀಲ, ರಾಮದುರ್ಗ, ಶ್ರೀಮಂತ ಪಾಟೀಲ, ಸವಸುದ್ದಿ ಮುಂತಾದವರು ಉಪಸ್ಥಿತರಿದ್ದರು.

