ಬೈಲಹೊಂಗಲ- ಕರ್ನಾಟಕ ಸರ್ಕಾರದ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಸಚಿವರಾದ ಈಶ್ವರ ಭೀಮಣ್ಣ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಭೇಟಿಯಾಗಿ ಮುಂಚಿತವಾಗಿ ಬಸವ ದಿನಚರಿ ಅರ್ಪಿಸಿ, ಗೌರವಿಸಿ, ಹಾರ್ದಿಕ ಅಭಿನಂದಿಸಿದರು
ಈ ಸಂದರ್ಭದಲ್ಲಿ ಅವರು ಮಾತನಾಡಿ, ನಿಮ್ಮ ನಿಷ್ಠೆ, ಸೇವಾಭಾವ, ಏಕತೆ ಹಾಗೂ ಬಸವಣ್ಣನವರ ಆದರ್ಶಗಳಿಗೆ ಸಲ್ಲುವ ಬದ್ಧತೆ ನಮ್ಮೆಲ್ಲರಿಗೂ ಪ್ರೇರಣಾದಾಯಕ. ನಿಮ್ಮ ನಾಯಕತ್ವದಲ್ಲಿ ಮಹಾಸಭೆಯು ಇನ್ನಷ್ಟು ಬಲಿಷ್ಠವಾಗಿ, ಸಮುದಾಯದ ಹಿತಕ್ಕಾಗಿ ಹೊಸ ಎತ್ತರಗಳನ್ನು ತಲುಪಲಿ ಎಂಬುದು ನಮ್ಮ ಕೋರಿಕೆ ಎಂದು ಹಾರೈಸಿದರು.
ಬೈಲಹೊಂಗಲ ಶ್ರೀ ಮಹಾಲಕ್ಷ್ಮಿ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅನ್ವರ ಹುಸೇನ ಖಾದಿರ ಸಾಹೇಬ ಪಾಟೀಲ, ಎಮ್.ಆರ್. ಸಪ್ಲಾಯರ್ಸ್ ಮಾಲಿಕರಾದ ಮಸ್ತಾನವಲಿ ಟಿ. ಶೇಖ್ ಅವರು ಉಪಸ್ಥಿತರಿದ್ದರು.
ನೂತನ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಭೀಮಣ್ಣ ಖಂಡ್ರೆ ಅವರನ್ನು ಖ್ಯಾತ ಉದ್ದಿಮೆದಾರರಾದ ಮಿಥುನ ವಿಠ್ಠಲ ಹುಗ್ಗಿ, ಮನ್ಮಥಯ್ಯ ಸ್ವಾಮಿ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಪ್ರೊ.ಸಿ.ವ್ಹಿ. ಜ್ಯೋತಿ,ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಸದೆಪ್ಪ ಕೋಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಮಹೇಶ ವೀರಭದ್ರಪ್ಪ ಕೋಟಗಿ(ಉಡಿಕೇರಿ), ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ಸಂತೋಷ ಚಂದ್ರಪ್ಪ ಕೊಳವಿ, ಉಪಾಧ್ಯಕ್ಷರಾದ ಶ್ರೀಶೈಲ ಉಳವಪ್ಪ ಶರಣಪ್ಪನವರ,ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ (ಇಂಚಲ), ಮಹಾಂತೇಶ ಶಿವಪ್ಪ ಮುದಕನಗೌಡರ (ಬೈಲವಾಡ), ಅರುಣ ರೇವಣೆಪ್ಪ ಬಂಕಾಪುರ (ಹಾವೇರಿ), ನಾಗನಗೌಡ ಹಾದಿಮನಿ(ಹಿರೇಬಾಗೇವಾಡಿ) ಮುಂತಾದ ಗಣ್ಯ ರು ಅಭಿನಂದಿಸಿದ್ದಾರೆ.

