ಸಾಹಿತ್ಯ, ಭಾಷೆ, ನೆಲ, ಜಲ, ಸಂಸ್ಕೃತಿ, ಶಿಕ್ಷಣ, ಸಂಗೀತ ಮತ್ತು ಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆ, ಸಾಧನೆ ಹಾಗೂ ಜ್ಞಾನ ದಾಸೋಹವನ್ನು ಪರಿಗಣಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯ ”ಕವಿತ್ತ ಕರ್ಮಮಣಿ ಫೌಂಡೇಶನ್” ನೀಡಲಾಗುವ ಪ್ರತಿಷ್ಠಿತ ವಿದ್ಯಾ ವಿಭೂಷಣ ಪ್ರಶಸ್ತಿ ಗೌರವಕ್ಕೆ ಮುಂಜಾನೆ ಬೆಳಕು ಪತ್ರಿಕೆಯ ವರದಿಗಾರ ಚೇತನ ಜಿ. ಕೋಟಗಿ ಅವರು ಪಾತ್ರರಾಗಿದ್ದಾರೆ.
ಫೌಂಡೇಶನ್ ಸಂಚಾಲಕ ಮಂಡಳಿಯು ಈ ನಿರ್ಣಯ ಕೈಗೊಂಡಿದೆ. ಜ.25, 26 ರಂದು ನಡೆಯಲಿರುವ ಈ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಚೇತನ ಜಿ ಕೋಟಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಾಲ್ಸಾಬ್ ಎಚ್ ಪಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

