ಬೆಳಗಾವಿ – ಕನ್ನಡಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ,ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಬೆಳಗಾವಿ ಜಿಲ್ಲೆಯ ಕವಿಗಳ ಸ್ವರಚಿತ ಕವನ ವಾಚನಗೋಷ್ಠಿ ಕನ್ನಡ ಭವನ ನೆಹರುನಗರ ಬೆಳಗಾವಿಯಲ್ಲಿ ದಿ. 17.01.2026.ರಂದು ಜರುಗಿತು.
ಮುಖ್ಯ ಅತಿಥಿಗಳಾಗಿ ಡಾ.ಸರಸ್ವತಿ ಕಳಸದ ನಿವೃತ್ತ ಪ್ರಾಚಾಯ೯ರು ಧಾರವಾಡ ಇವರು ಆಗಮಿಸಿದ್ದರು ಪ್ರಚಲಿತ ಕವನಗಳನ್ನು ಬರೆದು ಪ್ರಸ್ತುತ ಪಡಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಕವಿಯು ತನ್ನ ಭಾವನೆಗಳನ್ನು ಕವಿತೆಗಳ ಮೂಲಕ ಮಾನವೀಯ ಮೌಲ್ಯ ಬೆಳಸುವಂತ ಇಂತಹ ಕಾಯ೯ಕ್ರಮಗಳು ಸದಾ ಜರುಗಲಿ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಯ. ರು. ಪಾಟೀಲ.ಮಾಜಿ ಕ ಸಾ ಪ ಅಧ್ಯಕ್ಷರು ವಹಿಸಿದ್ದರು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಇಂದಿನ ಕವಿತೆಗಳು ಉಪಯುಕ್ತವಾಗಿದ್ದವು. ಹೊಸದನ್ನು ಕಲಿಯುತ್ತಾ ಸಾಗಬೇಕು ಇನ್ನೊಬ್ಬರಿಗೆ ಮಾಗ೯ದಶ೯ನವಾಗಬೇಕು ಸದಾ ಬರೆಯುತ್ತಾ ಇರಬೇಕು ಎಂದು ತಿಳಿಸಿದರು.
ಸಿ ಎಸ್ ಕಟಾಪೂರಿಮಠ ,ಗುರುಸಿದ್ದಪ್ಪ ರೇವಣ್ಣವರ, ಉಮೇಶ ಹಾರುಗೊಪ್ಪ, ಬಿ ಬಿ ಮಠಪತಿ,ಸುನೀತಾ ನಂದೇನ್ನವರ, ದಾನಮ್ಮ ಅಂಗಡಿ,ಡಾ ಅನ್ನಪೂಣ೯ ಹಿರೇಮಠ, ಅಕ್ಕಮಹಾದೇವಿ ತೆಗ್ಗಿ,ಬಾಬು ಪತ್ತಾರ,ಅ ಬ ಇಟಗಿ, ಬಾಳಗೌಡ ದೊಡಬಂಗಿ, ರೇಖಾ ಭಟ್ಟ,ಜಿ ಬಿ ಕುರಬೇಟ ಮುಂತಾದವರು ಕವನ ವಾಚನ ಮಾಡಿದರು.
ಕ ಸಾ ಪ ಕಾಯ೯ದಶಿ೯ಎಂ ವೈ ಮೆಣಸಿನಕಾಯಿ,ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿವಾನಂದ ತಲ್ಲೂರ ಸಹ ಕಾಯ೯ದಶಿ೯ ಸ್ವಾಗತಿಸಿದರು.ಶ್ರೀರಂಗ ಜೋಷಿ ನಾಡಗೀತೆ ಅಂದರು. ಡಾ ಅನ್ನಪೂರ್ಣ ಹಿರೇಮಠ ನಿರೂಪಿಸಿದರು.ಆರ್ ಬಿ ಬನಶಂಕರಿ,ವಂದಿಸಿದರು.ಜ್ಯೊತಿ ಬದಾಮಿ,ಪ್ರಭಾವತಿ ಗುರವ,ಸಾವಿತ್ರಿ ಭಟ್ಟ,ವರದಾ ಹೆಗಡೆ,ಸುನಿಲ ಪರೀಟ, ಸುಮನ ಪರೀಟ,ಗೋವಿಂದಾಚಾ೯ಯ ಕಟ್ಟಿ,ಶಿವಬಸಫ್ಪ ತಿಗಡಿ, ವಿಜಯಕುಮಾರ ಕಿಳ್ಳಿಕೇತರ ,ಲಲಿತಾ ರುದ್ರಗೌಡರ, ಮಲ್ಲಪ್ಪ ಚನ್ನಂಗಿ,ಶೋಭಾ ಶಿವಳ್ಳಿ,ಮಲ್ಲಿಕಾಜು೯ನ ನಿಲಗುಂದ,ಶಂಕರ ಕರಿಭೀಮಗೋಳ,ಪ್ರಕಾಶ ಓಸೆಕರ ಮುಂತಾದವರು ಉಪಸ್ಥಿತರಿದ್ದರು.

