ಸಿಂದಗಿ: ಮನುಷ್ಯನ ಹುಟ್ಟು ಸಾವುಗಳ ಮಧ್ಯೆ ಉಸಿರು ಹೋದರು ಹೆಸರು ಉಳಿಯುವ ಕಾರ್ಯ ಮಾಡಿದಂಥವರು ೧೨ನೇ ಶತಮಾನದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಕೂಡಾ ಒಬ್ಬ ವಚನಕಾರರು. ಎಲ್ಲರ ಜಯಂತಿಗಳು ಆಚರಣೆಗೆ ಬರುವುದಿಲ್ಲ ಸಾಧನೆಗಳ ಮೇಲೆ ಜಯಂತಿಗಳನ್ನು ಆಚರಿಸುತ್ತೇವೆ ಅಂತಹ ಶರಣರು ದೇಶವ್ಯಾಪಿ ಸುತ್ತಾಡಿ ವಚನಗಳ ಮೂಲಕ ಜನಜಾಗೃತಿ ಮಾಡಿದವರಲ್ಲಿ ದೊಡ್ಡ ಶರಣರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದಲ್ಲಿರುವ ಅಂಬಿಗರ ಚೌಡಯ್ಯನ ವೃತ್ತದಲ್ಲಿನ ಮೂರ್ತಿಗೆ ಗೌರವ ಸಲ್ಲಿಸಿ ಮಾತನಾಡಿ, ಬಸವಣ್ಣನವರ ಸಮಕಾಲಿನ ಶರಣರು ಸಮ ಸಮ ಸಮಾಜ ನಿರ್ಮಾತೃ ಶರಣರನ್ನು ಆಯಾ ಜಾತಿಗೆಸೀಮಿತಗೊಳಿಸಿಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಅವರು ಬಿಟ್ಟು ಹೋದ ವಚನಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ನಡೆಯೋಣ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ.ಸಿ ಮಯೂರ ಮಾತನಾಡಿ, ಸಮಾಜದ ಎಲ್ಲ ರಂಗಗಳಲ್ಲಿ ಸಾಮಾಜಿಕ ಅಸಮಾನತೆಯನ್ನು ಕಾಣುತ್ತಿರುವ ವ್ಯವಸ್ಥೆಯಲ್ಲಿ ೧೨ನೇ ಶತಮಾನದಲ್ಲಿ ಘನಘೋರವಾದ ಅಸಮಾನತೆಯನ್ನು ತೊಳೆಯಲು ಸಮಾಜದ ಅಂಕುಡೊಂಕುಗಳನ್ನು ಓರೆ ಕೋರೆಗಳನ್ನು ಅಳಿಸಿಹಾಕಲು ಅಗ್ರಗಣ್ಯ ಶರಣರಾದ ಅಂಬಿಗರ ಚೌಡಯ್ಯನವರು ಒಬ್ಬರು. ಅಣ್ಣ ಬಸವಣ್ಣನವರಿಂದ ನಿಜ ಶರಣರೆಂದು ಕರೆಸಿಕೊಂಡವರು. ಮೌಡ್ಯದ ವಿರುದ್ಧ ತೀಕ್ಷ್ಣವಾಗಿ ವಚನಗಳನ್ನು ಬರೆದವರು. ತಮ್ಮ ಹೆಸರನ್ನೇ ಅಂಕಿತನಾಮವಾಗಿ ಇಟ್ಟುಕೊಳ್ಳುವ ಮೂಲಕ ಬಂಡಾಯದ ಕಹಳೆ ಊದಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಒಂದು ಜಾತಿಗೆ ಸಿಮಿತಗೊಳೀಸದೇ ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.
ಸಮಾಜದ ಮುಖಂಡರಾದ ಮಲ್ಲು ಗತ್ತರಗಿ ವಕೀಲರು ಮಾತನಾಡಿ, ೧೨ ನೇ ಶತಮಾನದಲ್ಲಿ ಬಸವ ಕಲ್ಯಾಣದ ಅನುಭವ ಮಂಟಪದ ಸದಸ್ಯರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ಸಮಾಜದಲ್ಲಿನ ಮೌಢ್ಯತೆ ತೊಳೆದು ಹಾಕುವಲ್ಲಿ ವಚನಗಳನ್ನು ಬರೆದು ಚಾಟಿ ಬಿಸಿದ್ದಾರೆ ಅವರ ವಚನಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಅನುಕರಣೆಯಲ್ಲಿ ತರಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕರೆಪ್ಪ ಬೆಳ್ಳಿ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ರಾಕೇಶ ರೋಡಗಿ, ಬೀಮು ಬೀರಗೊಂಡ, ಜಯಶ್ರೀ ಹದನೂರ, ಬಸವರಾಜ ಯರನಾಳ, ರಾಜು ನರಗೋದಿ, ಸಂತೋಷ ಹರನಾಳ, ವಿಜಯ ಯಾಳವಾರ, ನೀಲಮ್ಮ ಯಡ್ರಾಮಿ, ಚಂದ್ರಶೇಖರ ದೇವರೆಡ್ಡಿ, ನಾಗೇಶ ತಳವಾರ, ಕಂದಾಯ ನಿರೀಕ್ಷಕ ಐ.ಎ ಮಕಾಂದಾರ, ಬೀಮು ವಾಲೀಕಾರ, ಸುನಂದಾ ಯಂಪೂರೆ, ವರ್ಷಾ ಪಾಟೀಲ, ಕೆಇಬಿ ಗುತ್ತಿಗೆದಾರ ಬೋಗೇಶ ನರಗೋದಿ, ಗಂಗಾಧರ ಸೋಮನಾಯ್ಕ, ಅನೀಲ ಕರಾಬಿ ಸೇರಿದಂತೆ ಅನೇಕರಿದ್ದರು.

