ಬೆಳಗಾವಿ – ಕನಾ೯ಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಫೆಬ್ರುವರಿ ಒಂದರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ ೨೦೨೬ರ ಸವಾ೯ಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಮತ್ತು ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ಡಾ.ಹೇಮಾವತಿ ಸೊನೊಳ್ಳಿಯವರಿಗೆ ದಿ.೨೩ರಂದು ಸತ್ಕರಿಸಿ ಆಹ್ವಾನ ನೀಡಲಾಯಿತು.
ಕರ್ನಾಟಕ ರಾಜ್ಯ ಬರಹಗಾರರ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ ಸಕ್ರೆನ್ನವರ ಅವರು ಡಾ.ಹೇಮಾವತಿ ಸೊನೊಳ್ಳಿ ಅವರಿಗೆ ಸತ್ಕರಿಸಿ ಆಹ್ವಾನ ನೀಡಿದರು.ಎಂ.ವೈ ಮೆಣಸಿನಕಾಯಿ, ಬಾಳಗೌಡ ದೊಡಬಂಗಿ, ಶಿವಾನಂದ ತಲ್ಲೂರ ಉಪಸ್ಥಿತರಿದ್ದರು
ಸುರೇಶ ಸಕ್ರೆನ್ನವರ ಸ್ವಾಗತಿಸಿದರು.ಶಿವಾನಂದ ತಲ್ಲೂರ ನಿರೂಪಿಸಿದರು. ಎಂ ವೈ ಮೆಣಸಿನಕಾಯಿಯವರು ವಂದಿಸಿದರು.

