ಮೂಡಲಗಿ – ಪಟ್ಟಣದ ಬಳಿಗಾರ ಓಣಿಯ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ಪಲ್ಲಕ್ಕಿ ಆಗಮನ ಹಾಗೂ ೩೨ನೇ ಜಾತ್ರಾ ಮಹೋತ್ಸವವು ಜ.೨೭ ಹಾಗೂ ೨೮ ರಂದು ಶ್ರೀ ಬಸವ ರಂಗ ಮಂಟಪದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಧರ್ಮಾದಿಕಾರಿ ಈರಯ್ಯಾ ಹಿರೇಮಠ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾಹಿತಿ ನೀಡುತ್ತಾ, ಶ್ರೀಶೈಲ ಮಹಾಪೀಠದ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹಾಗೂ (ವಾರಣಾಸಿ) ಕಾಶೀ ಜಂಗಮವಾಡಿ ಮಠದ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮತ್ತು ಪಟ್ಟಣದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು, ಮುನ್ಯಾಳ-ರಂಗಾಪೂರದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಗಳು, ಮಮದಾಪೂರದ ಶ್ರೀ ಮೌನ ಮಲ್ಲಿಕಾರ್ಜುನ ಸ್ವಾಮಿಗಳು, ಇಟನಾಳದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ನಾಗನೂರದ ಡಾ|| ಕಾವ್ಯಾ ಅಮ್ಮನವರು ಸಮ್ಮುಖದಲ್ಲಿ ಜ.೨೭ ರಂದು ಮುಂಜಾನೆ ೭ಗಂಟೆಗೆ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ಪಲ್ಲಕ್ಕಿ ಜಗದ್ಗುರುಗಳಿಂದ ಚಾಲನೆ. ಸಂಜೆ ೪ಗಂಟೆಗೆ ಪಲ್ಲಕ್ಕಿ ರುದ್ರಾಭಿಷೇಕ ಹಾಗೂ ಮಹಾ ಪೂಜೆ, ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಿಂದ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ಹಾಗೂ ಕುಂಭಮೇಳದೊಂದಿಗೆ ಬೆಳ್ಳಿ ರಥ ಶ್ರೀ ಭವ್ಯ ಮೆರವಣಿಗೆಯು ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದವರೆಗೆ ಸಕಲ ವಾದ್ಯಗಳೊಂದಿಗೆ ಜರುಗುವದು. ನಂತರ ಧರ್ಮಸಭೆ ನಡೆಯಲಿದೆ. ಆ.೨೮ರಂದು ಮುಂಜಾನೆ ೫ಗಂಟೆಗೆ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಗದ್ದುಗೆಗೆ ರುದ್ರಾಭಿಷೇಕ ನೇರವೆರುವದು. ನಂತರ ಗುಗ್ಗುಳ ಮಹೋತ್ಸವ ಹಾಗೂ ಅನ್ನಪ್ರಸಾದ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಹಿರೇಮಠ, ಸಿದ್ದಯ್ಯಾ ಹಿರೇಮಠ, ವಿಕಾಸ ಅಂಬಲಿಮಠ, ಬಸಯ್ಯಾ ಹಿರೇಮಠ ಇದ್ದರು.

