ಬಸ್ ಚಾಲಕರು ಪ್ರಯಾಣಿಕರ ಜೀವ ರಕ್ಷಕರು – ಬಾಲಶೇಖರ ಬಂದಿ

Must Read

ಮೂಡಲಗಿ: ಮೂಡಲಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ನಿಲ್ದಾಣ ಅಧಿಕಾರಿಗಳು, ಮೂಡಲಗಿಯ ನಿಸರ್ಗ ಫೌಂಡೇಶನ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಬಸ್ ಚಾಲಕರನ್ನು ಶಾಲು ಹೊದಿಸಿ, ಸಿಹಿ ವಿತರಿಸಿ ಅವರನ್ನು ಗೌರವಿಸುವ ಮೂಲಕ ಬಸ್ ಚಾಲಕರ ದಿನಾಚರಣೆಯನ್ನು ಆಚರಿಸಿದರು.

ಚಾಲಕರಾದ ಎನ್.ಎಲ್. ನದಾಫ, ಬಾಬಾಸಾಹೇಬ ಕಾಂಬಳೆ, ಟಿ.ಎಸ್. ಬಿರಾದಾರ, ಎಂ.ಡಿ. ಹಿಪ್ಪರಗಿ, ಎ.ಎಂ. ಬಿಳೂಂಡಗಿ, ಎಸ್.ಎನ್. ಪಿರಜಾದೆ, ಎಸ್.ಎಸ್. ಟೊನಪೆ ಅವರನ್ನು ಸನ್ಮಾನಿಸಿದರು.

ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ‘ಬಸ್ ಚಾಲಕರು ಹಗಲು, ರಾತ್ರಿ ಎನ್ನದೆ ತಮ್ಮ ಮನೆ, ಕಟುಂಬದಿಂದ ಇಡೀ ದಿನ ದೂರವಿದ್ದು ಜನರನ್ನು ಸುಗಮವಾಗಿ ಅವರ ಸ್ಥಳಗಳಿಗೆ ತಲುಪಿಸುವಂತ ತ್ಯಾಗ ಮನೋಭಾವದ ಕಾರ್ಯವು ಶ್ಲಾಘನೀಯವಾಗಿದೆ” ಎಂದರು.

ಚಾಲಕರು ತಮ್ಮ ಕರ್ತವ್ಯದಲ್ಲಿ ಊಟ, ನಿದ್ರೆಯ ಚಿಂತೆ ಇಲ್ಲ. ಆರೋಗ್ಯವನ್ನು ಅನುಲಕ್ಷಿಸಿ ಮತ್ತು ರಸ್ತೆಗಳಲ್ಲಿ ವಾಹನಗಳ ಸಂಚಾರದ ದಟ್ಟಣೆಯಲ್ಲಿ ಜನರನ್ನು ಸುರಕ್ಷಿತವಾಗಿ ಒಯ್ಯುವಂತ ಅತ್ಯಂತ ದಕ್ಷತೆಯಿಂದ ಸೇವೆಯನ್ನು ಮಾಡುವರು. ಬಸ್ ಚಾಲಕರು ಪ್ರಯಾಣಿಕರ ಜೀವ ರಕ್ಷಕರು ಆಗಿದ್ದಾರೆ ಎಂದರು.

ನಿಸರ್ಗ ಫೌಂಡೇಶನ್‌ದ ಅಧ್ಯಕ್ಷ ಈರಪ್ಪ ಢವಳೇಶ್ವರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಚಾಲಕರ ಮೇಲೆ ಪುಷ್ಪವೃಷ್ಟಿ ಮಾಡಿ ಶುಭಕೋರಿದರು.
ನಿಲ್ದಾಣಾಧಿಕಾರಿಗಳಾದ ಬಿ.ಬಿ. ದಂಡಾಪೂರ, ಶ್ರೀಶೈಲ ದೇಸರಟ್ಟಿ, ಮಾರುತಿ ಹಡಪದ, ನಿವೃತ್ತ ನಿರ್ವಾಹಕ ಜೆ.ವಿ. ಮಾನೆ, ಸುರೇಶ ಭಜಂತ್ರಿ, ಸುರೇಶ ಮಡಿವಾಳರ, ಶಿವಬಸು ಮೋರೆ, ಸೈಫನ್ ಜಾತಿಗಾರ ಇದ್ದರು.

LEAVE A REPLY

Please enter your comment!
Please enter your name here

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group