ಈರಪ್ಪ ಮಾದರ ಅವರಿಗೆ ಜನಪದ ಭೂಷಣ ಪ್ರಶಸ್ತಿ

Must Read

ಮುಧೋಳ- ಕಳೆದ 30 ವರ್ಷಗಳಿಂದ ಜಾನಪದ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಾ ಬಂದಿರುವ ಮುಧೋಳದ ಹಂಚಿನಾಳ [ಆರ್.ಸಿ.] ಪುನವ೯ಸತಿ ಕೇಂದ್ರದ ಜನಪದ ಕಲಾವಿದ ಈರಪ್ಪ ಮಾದರ ಅವರಿಗೆ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನವು ನೀಡುತ್ತಿರುವ 2026ರ ರಾಜ್ಯ ಮಟ್ಟದ ಜನಪದ ಭೂಷಣ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಲೂಕಿನ ಪುಣ್ಯ ಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದ ಸಾಂಸ್ಕೃತಿಕ ಭವನದಲ್ಲಿ ನಡೆದ ರಾಜ್ಯ ಮಟ್ಟದ ಜನಪದ‌ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸಾಧು ಚಕ್ರವರ್ತಿ ಜಗದ್ಗುರು ಡಾ.ಶ್ರೀ ಶಿವಾನಂದ ಭಾರತಿ ಶ್ರೀಗಳು ಪ್ರಶಸ್ತಿ ನೀಡಿ ಗೌರವಿಸಿದರು.

ಸದ್ಗುರು ಶ್ರೀ ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳು. ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು.ಹಿರಿಯರಾದ ನಾಗಪ್ಪ ಐಹೊಳೆ.ಪಿ. ಜಿ.ಗಣಿ.ಶಿವಪ್ಪ ಪವಾಡಶಟ್ಟಿ, ರಮೇಶ ತಳಪಟ್ಟಿ, ಸಂಗಪ್ಪ ಗಣಿ, ಬಸವ ಜಾನಪದ ಕಲಾವಿದರ ಸಂಸ್ಥೆಯ ಅಧ್ಯಕ್ಷ ರಮೇಶ ಸೋಲೋನಿ, ಪಿ.ಕೆ.ಪಿ.ಎಸ್. ಸದಸ್ಯ ಮುತ್ತಪ್ಪ ಪೋಳ, ಪ್ರತಿಷ್ಠಾನದ ಉಪಾಧ್ಯಕ್ಷ ಮುತ್ತಪ್ಪ ಬನಾಜಗೋಳ ಮುಂತಾದವರು ಉಪಸ್ಥಿತರಿದ್ದರು –

ಅಭಿನಂದನೆ- ಮಹಾದೇವ ಮಾದರ, ಮುತ್ತಪ್ಪ ಮಾದರ, ಎಂ.ರಮೇಶ.ರಾಮಪ್ಪ ಮಾದರ ಸೇರಿದಂತೆ ಅನೇಕ ಬಂಧುಗಳು ಪುರಸ್ಕೃತ ಕಲಾವಿದ ಈರಪ್ಪ ಮಾದರ ಅವರಿಗೆ ಅಭಿನಂದನೆ ಸಲ್ಲಿಸಿದರು

LEAVE A REPLY

Please enter your comment!
Please enter your name here

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group