ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

Must Read
ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ “ಯುವ ಸಾಧಕರಿಗೆ ಪ್ರಶಸ್ತಿ” ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ಕೊಡಮಾಡುವ 2026 ನೇ ಸಾಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ರಾಜ್ಯದ 31 ಜಿಲ್ಲೆಯ ಸಾಧಕರಿಗೆ ಮತ್ತು ರಾಜ್ಯದ ಎರಡು ಸಂಘಟನೆಗಳಿಗೆ ಸಾಂಘೀಕ ಪ್ರಶಸ್ತಿಯನ್ನು ರಾಜ್ಯ ಅಧ್ಯಕ್ಷರಾದ ಡಾ. ಎಸ್ ಬಾಲಾಜಿ ಅವರ ಮುಂದಾಳತ್ವದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  ಸಾಯಿನಾಥ್ ಲಮಾಣಿ ಉತ್ತರಕನ್ನಡ ಜಿಲ್ಲೆ, ನಿತೀಶ್ ಬೆಂಗಳೂರು ಗ್ರಾಮಂತರ ಜಿಲ್ಲೆ, ಸಂಜಯ್ ಟಿಪಿ ದಾವಣಗೆರೆ ಜಿಲ್ಲೆ, ಅಕ್ಷಯ್ ಹೆಚ್ ಎಮ್ ಶಿವಮೊಗ್ಗ ಜಿಲ್ಲೆ, ಅಭಿಷೇಕ್ ಹೆಗಡೆ ಮೈಸೂರು ಜಿಲ್ಲೆ, ಚನ್ನಬಸಪ್ಪ ತುರವಿಹಾಳ ರಾಯಚೂರು ಜಿಲ್ಲೆ, ನಂದೀಶ್ ಎಚ್ ಕೆ ಚಿಕ್ಕಮಂಗಳೂರು ಜಿಲ್ಲೆ, ಸಚಿನ್ ತಾಲೂಕಿಗೆ ಧಾರವಾಡ ಜಿಲ್ಲೆ, ಚಂದ್ರಶೇಖರ್ ಕುರಿ ಗದಗ ಜಿಲ್ಲೆ, ಧನುಷ್ ಎಸ್ ಹೆಚ್ ತುಮಕೂರು ಜಿಲ್ಲೆ, ಪ್ರಜ್ವಲ್ ಕೆ ಚಿತ್ರದುರ್ಗ ಜಿಲ್ಲೆ, ಋತುರಾಜ್ ಖೋತ್ ವಿಜಯಪುರ ಜಿಲ್ಲೆ, ಹರೀಶ್ ಎನ್ ಬೆಂಗಳೂರು ನಗರ, ಶ್ರೀ ಕೃಷ್ಣಪ್ಪ ಮಂಡ್ಯ ಜಿಲ್ಲೆ, ವಿಜೇತ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆ, ಬಿ ಎಲ್ ಯಶಸ್ ರೈ ಕೊಡಗು ಜಿಲ್ಲೆ, ರಂಜಿತ್ ಕೆ ಎಸ್ ಕೋಲಾರ್ ಜಿಲ್ಲೆ, ಕುಮಾರಿ ಅಶ್ವಿನಿ ಯಾದಗಿರಿ ಜಿಲ್ಲೆ, ಶರಣು ಕೋಳಶೆಟ್ಟಿ ಗುಲ್ಬರ್ಗ ಜಿಲ್ಲೆ, ಹೃತಿಕ್ ಕುರುಬರ ಹಾವೇರಿ ಜಿಲ್ಲೆ, ಕುಮಾರಿ ಗೌರಮ್ಮ ಬೀದರ್ ಜಿಲ್ಲೆ, ಸಚಿನ್ ಎಚ್ಡಿ ಉಡುಪಿ ಜಿಲ್ಲೆ, ಮಲ್ಲಿಕಾರ್ಜುನ್ ಸಿದ್ನಕೊಪ್ಪ ಕೊಪ್ಪಳ ಜಿಲ್ಲೆ, ನಿರಂಜನ ಎ ಆರ್ ಚಿಕ್ಕಮಂಗಳೂರು ಜಿಲ್ಲೆ, ಬಾಳು ಬೆಳಗುಂದಿ ಬೆಳಗಾವಿ ಜಿಲ್ಲೆ, ಗಿರೀಶ್ ಬಿ ಪಿ ಹಾಸನ ಜಿಲ್ಲೆ, ನವೀನ್ ವರ್ಮ ಚಾಮರಾಜನಗರ ಜಿಲ್ಲೆ, ನಾಗೇಂದ್ರ ಆರ್ ರಾಮನಗರ ಜಿಲ್ಲೆ, ಸೋಹಿಲ್ ಕಂದಗಲ್ ಬಾಗಲಕೋಟೆ ಜಿಲ್ಲೆ, ವಾಗೀಶ್ ಆಶಾಪುರ್ ಬಾಗಲಕೋಟೆ ಜಿಲ್ಲೆ, ಶ್ರೀಮತಿ ಲಕ್ಷ್ಮಿ ಮರದ ಶಾರದಾ ವಿಜಯನಗರ ಜಿಲ್ಲೆ, ಮಮ್ಮದ್ ಅಜರುದ್ದೀನ್ ಶೇಖಜಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ, ಶ್ರೀ ಮಾಲಕ್ಷ್ಮಿ ದೇವಿ ಡೊಳ್ಳು ಕುಣಿತ ಕಲಾ ಸಂಘ ಹಳ್ಳೂರು ಬೆಳಗಾವಿ ಜಿಲ್ಲೆ,  ವೀರರಾಣಿ ಕಿತ್ತೂರ ಚೆನ್ನಮ್ಮ ಸಾಂಸ್ಕೃತಿಕ ಕಲಾಸಂಘ ಮುಧೋಳ ಬಾಗಲಕೋಟೆ ಜಿಲ್ಲೆ ರಾಜ್ಯದ 31 ಜಿಲ್ಲೆಯ ಯುವ ಸಾಧಕರಿಗೆ ಪ್ರಸಸ್ತಿ ಪ್ರದಾನ ಮಾಡಲಾಗುವುದು.
ಅರಬಾವಿ ಕ್ಷೇತ್ರದ ಶಾಸಕರು ಹಾಗೂ ಬೆಳಗಾವಿ ಕೆ ಎಮ್ ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು,
   ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಯನ್ನು ಚಿಕ್ಕೋಡಿ ಲೋಕಸಭಾ ಸಂಸದರಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿ ಪ್ರಶಸ್ತಿ ಪ್ರದಾನ ಮಾಡುವರು. ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹಾಗೂ ಹುಲಿಜಂತಿ ಮಾಳಿಂಗರಾಯ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸುವರು.
 ಜನವರಿ ದಿನಾಂಕ 26 ಮತ್ತು 27 ರಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಜಿಲ್ಲಾ ಘಟಕ ಬೆಳಗಾವಿ ಹಾಗೂ ಶ್ರೀ ಮಹಾಲಕ್ಷ್ಮಿ ದೇವಿ ಡೊಳ್ಳು ಕುಣಿತ ಕಲಾ ಸಂಘ ಮತ್ತು ಶ್ರೀ ಇಟ್ಟಪ್ಪ ದೇವರ ಅಭಿವೃದ್ಧಿ ಸೇವಾ ಸಮಿತಿ ಹಳ್ಳೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ವಾಗಿ ರಾಜ್ಯ ಮಟ್ಟದ ಜಾನಪದ ಜಾತ್ರೆ ಹಾಗೂ “ಯುವ ಜಾತ್ರೆ” ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗೂ ವಿವಿಧ ಜಿಲ್ಲೆಯ ಕಲಾ ತಂಡಗಳು ಭಾಗವಹಿಸುತ್ತವೆ  ಎಂದು ಕಾರ್ಯಕ್ರಮದ ರೂವಾರಿ ಸಿದ್ದಣ್ಣ ದುರದುಂಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಸಿಂದಗಿಯಲ್ಲಿ ರಾಷ್ಟ್ರೀಯ ಮತದಾರರ ದಿನ

ಸಿಂದಗಿ: ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ಸಾರುವ, ಹೊಸ ಮತದಾರರನ್ನು ಪ್ರೋತ್ಸಾಹಿಸುವ ಮತ್ತು ಚುನಾವಣಾ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ನಾಗೇಶ...

More Articles Like This

error: Content is protected !!
Join WhatsApp Group