ಸಿಂದಗಿ; ೧೯೪೭ ರ ಆಗಸ್ಟ್ ೧೫ ರಂದು ಸ್ವಾತಂತ್ರ‍್ಯ ಪಡೆದರೂ ಕೂಡಾ ರಾಜ್ಯದ ಸುಗಮ ಕಾರ್ಯನಿರ್ವಹಣೆಗೆ ಯಾವುದೇ ಪರಿಣಿತ ಮತ್ತು ರಾಜಕೀಯ ಅಧಿಕಾರವನ್ನು ಭಾರತ ಹೊಂದಿದ್ದಿಲ್ಲ. ಆ ಹೊತ್ತಿಗೆ, ೧೯೩೫ ರ ಭಾರತ ಸರ್ಕಾರದ ಕಾಯಿದೆಯು ಮೂಲಭೂತವಾಗಿ ಆಡಳಿತಕ್ಕೆ ತಿದ್ದುಪಡಿ ಮಾಡಲ್ಪಟ್ಟಿತು, ೧೯೫೦ ಜನವರಿ ೨೬ ರಂದು ಸಂವಿಧಾನವನ್ನು ಅಂಗೀಕರಿಸಿ, ಅನ್ವಯಿಸಿಕೊಂಡು ಗಣರಾಜ್ಯೋತ್ಸವ ವೆನಿಸಿಕೊಂಡಿತು. ಅಲ್ಲಿಂದೀಚೆಗೆ ಪ್ರತಿವರ್ಷ ಜನವರಿ ೨೬ ರಂದು ಅತ್ಯಂತ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಪತ್ರಕರ್ತ ಆನಂದ ಶಾಬಾದಿ ಹೇಳಿದರು.
ಪಟ್ಟಣದ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ೭೭ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ೨೯೯ ಸದಸ್ಯರನ್ನು ಹೊಂದಿರುವ ಡಾ.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಮೊದಲ ಸಭೆಯು ಡಿಸೆಂಬರ್ ೧೯೪೬ ರಲ್ಲಿ ಸಂವಿಧಾನ ಸಭೆಯನ್ನು ರಚಿಸಲಾಯಿತು. ೨ ವರ್ಷ ೧೧ ತಿಂಗಳು ೧೮ ದಿನಗಳಲ್ಲಿ ಇದು ಅಂತಿಮವಾಗಿ ೨೬ ನವೆಂಬರ್ ೧೯೪೯ ರಂದು ಪೂರ್ಣಗೊಂಡಿತು. ಇದನ್ನು ೨೬ ಜನವರಿ ೧೯೫೦ ರಂದು ದೇಶಾದ್ಯಂತ ಜಾರಿಗೆ ತರಲಾಯಿತು.ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು ಎಂದರು.
೭೭ನೆ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಮ ಪಾಟೀಲ ಹೂನಳ್ಳಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾನಿಪ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ಇಸ್ಮಾಯಿಲ್ ಶೇಖ ಮಾತನಾಡಿ, ಈ ದೇಶಕ್ಕಾಗಿ ಶ್ರಮಿಸಿದ ಮಹಾಪುರುಷರ ಹಾಗೂ ಪ್ರತಿವರ್ಷ ಆಚರಿಸಲ್ಪಡುವ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಇಂದಿನ ಯುವ ಪೀಳಿಗೆ ಪರಿಚಯಿಸುವ ಕಾರ್ಯ ನಡೆದಾಗ ಮಾತ್ರ ರಾಷ್ಟ್ರೀಯ ಹಬ್ಬಗಳಿಗೆ ಆರ್ಥ ಬರುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಕಾರ್ಯದರ್ಶಿ ಕಾಂಚನಾ ನಾಗರಬೆಟ್ಟ, ಶಕುಂತಲಾ ಹಿರೇಮಠ, ಮಾಜಿ ರಾಜ್ಯ ಪರಿಷತ್ ಸದಸ್ಯ ಸಂಗನಗೌಡ ಪಾಟೀಲ ಅಗಸಬಾಳ, ಗುತ್ತಿಗೆದಾರ ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಪತ್ರಕರ್ತರಾದ ಪಂಡಿತ ಯಂಪೂರೆ, ವಿಜು ಪತ್ತಾರ, ವಿನಾಯಕ ಅಗಸರ, ಸಿದ್ದು ಕಡಗಂಚಿ ಕಸಾಪ ಮಾಜಿ ಅಧ್ಯಕ್ಷ ಶಿವು ಬಡಾನೂರ, . ಸುಮಾ ವಸ್ತçದ, ಶರಣಮ್ಮ ಬಿರಾದಾರ, ಸೇರಿದಂತೆ ಅನೇಕರಿದ್ದರು.
ಪ್ರಾಚಾರ್ಯ ಸಂದೀಪ ಚಾಂದಕವಟೆ ಸ್ವಾಗತಿಸಿದರು. ಶಿಕ್ಷಕಿ ನಿಶಾ ಕಲಾವಂತ ನಿರೂಪಿಸಿದರು. ರಾಜು ಕಾಂಬಳೆ ವಂದಿಸಿದರು.

