ಸವದತ್ತಿ : ದಿ. 01-02-2026 ರ ಭಾನುವಾರದಂದು ಬೆಳಿಗ್ಗೆ 10 – 00 ಗಂಟೆಗೆ ಸವದತ್ತಿಯಲ್ಲಿರುವ ಜ್ಯೋತಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ. ಸಭಾಂಗಣದಲ್ಲಿ ಗಾಣಿಗರ ಏಕತಾ ಸಮಿತಿ ಮತ್ತು ಜ್ಯೋತಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗದಲ್ಲಿ, ಶಿಕ್ಷಕಸಾಹಿತಿ ಡಾ.ವೈ ಬಿ.ಕಡಕೋಳ ಸಂಪಾದಕತ್ವದಲ್ಲಿ ತಯಾರಾದ ಗಾಣಿಗ ಸಮಾಜದ ನೌಕರರ ಮಾಹಿತಿ ಪುಸ್ತಕ ಹಾಗೂ ಗಾಣಕುಲ ಸಿಂಚನ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಮತ್ತು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ಗಾಣಿಗ ಸಮುದಾಯದ ಗಣ್ಯರುಗಳಾದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾದ ಡಾ. ಶರಣಬಸಪ್ಪ ಯತ್ನಳ್ಳಿ, ಹಿರಿಯ ಪತ್ರಕರ್ತರಾದ ಬಿ ಕೆ ಮುರಳಿಕೃಷ್ಣ ಸೇರಿ ಅನೇಕ ಗಣ್ಯರಿಗೆ ರಾಜ್ಯಮಟ್ಟದ ಗಾಣಿಗರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಿಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜ್ಯೋತಿ ಕೋ ಆಪರೇಟಿವ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾದ ಮಹಾಬಲೇಶ್ವರ ಪುರದ ಗುಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಗಾಣಿಗ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಆರ್ ಜಿ ಪಾಟೀಲ, ಶಿಕ್ಷಕ ಸಾಹಿತಿಗಳಾದ ಪಂಡಿತ ಆವಜಿ, ದಾರವಾಡ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು ಮಲ್ಲಿಕಾರ್ಜುನ ತೊದಲಬಾಗಿ, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಮತಿ ಆರ್ ರಮಾ, ಸಾಹಿತಿಗಳಾದ ಡಾ. ವೈ. ಬಿ. ಕಡಕೋಳ, ಅಖಿಲ ಭಾರತ ಗಾಣಿಗ ಸಂಘದ ಸಂಸ್ಥಾಪಕ ಪ್ರಮುಖರಾದ ಅಶೋಕ ನವಲಗುಂದ ಸೇರಿ ರಮೇಶ ಉಟಗಿ, ಅಖಿಲ ಭಾರತ ಗಾಣಿಗರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರು, ಹುಬ್ಬಳ್ಳಿ ಕರ್ನಾಟಕ ರಾಜ್ಯ ಗಾಣಿಗ ಮಹಿಳಾ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಉಟಗಿ, ಮಂಡ್ಯ ಜಿಲ್ಲೆಯ ಗಾಣಿಗ ಸಮಾಜದ ಮುಖಂಡರಾದ ಶಿವಕುಮಾರ ಹುಬ್ಬಳ್ಳಿಯ ಕೆಎಂ ಗದಗೇರಿ, ಸವದತ್ತಿಯ ಶಿವಕುಮಾರ್ ಗಾಣಗಿ, ಧಾರವಾಡದ ಕೆಬಿ ಕುರಹಟ್ಟಿ, ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರು ಮತ್ತು ಸಂಯೋಜಕರು ಆದ ಡಾ. ಮೇಘನಾ ಜಿ ಹಾಗೂ ಕಾರ್ಯಕ್ರಮದ ಸಂಚಾಲಕರು ಸಮಾಜದ ಹಿರಿಯರು ಆದ ಶಿಕ್ಷಕ ಸಾಹಿತಿ ಎಲ್ ಐ ಲಕ್ಕಮ್ಮನವರ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

