ಮೂಡಲಗಿ – ಘಟಪ್ರಭೆ ನದಿಯ ತೀರದಲ್ಲಿ ಜನಿಸಿ ಭಕ್ತರ ಭಾಗ್ಯದಾತೆಯಾಗಿ ತನ್ನ ಕೀರ್ತಿಯನ್ನು ಜಗಕ್ಕೆ ತೋರಿದ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವ ಫೆ. ೦೨ ರಿಂದ ೦೪ ರವರಿಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಗ್ರಾಮೀಣ ಕ್ರೀಡೆಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಭರಮಪ್ಪ ಗಂಗನ್ನವರ ತಿಳಿಸಿದರು.
ಬುಧವಾರ ತಾಲೂಕಿನ ಮಸಗುಪ್ಪಿಯ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಜಾತ್ರಾ ಮಹೋತ್ಸವದ ಮಾಹಿತಿ ನೀಡಿದ ಅವರು ಸೋಮವಾರ ಫೆ.೦೨ ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಮಹಾಲಕ್ಷ್ಮೀದೇವಿಗೆ ಹಾಗೂ ಶ್ರೀ ಬಸವೇಶ್ವರ ಅಭಿಷೇಕ ಮತ್ತು ವಿಷೇಶ ಪೂಜೆ, ಸಂಜೆ ೫-೩೦ಕ್ಕೆ ಅರಬಾವಿಯ ಶ್ರೀ ಬಸವಲಿಂಗ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡುವರು. ಮಂಗಳವಾರ ಸುಣಧೋಳಿಯ ಶ್ರೀ ಶಿವಾನಂದ ಶ್ರೀಗಳು ಬೆಳ್ಳಿ ಮೂರ್ತಿ ಸಮರ್ಪಣೆ ಮಾಡುವರು. . ಬೆಳಿಗ್ಗೆ ೫ಕ್ಕೆ ಅಭಿಷೇಕ, ೮ ಗಂಟೆಗೆ ಗ್ರಾಮ ದೇವತೆಗಳ ಉಡಿ ತುಂಬುವ ಕಾರ್ಯಕ್ರಮ, ೧೦ ಗಂಟೆಗೆ ನೈವೇದ್ಯ ನಂತರ ಜರುಗುವ ಎತ್ತುಗಳ ತೆರೆಬಂಡಿ ಸ್ಪರ್ಧೆಯ ಸಮಾರಂಭದ ಸಾನ್ನಿಧ್ಯವನ್ನು ಭಗೀರಥ ಪೀಠದ ಶ್ರೀ ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳು ವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಸಂಸದರಾದ ಜಗದೀಶ ಶೆಟ್ಟರ, ಈರಣ್ಣಾ ಕಡಾಡಿ ಜ್ಯೋತಿ ಬೆಳಗಿಸುವರು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಮತ್ತು ಅನೇಕ ಜನ ಪ್ರತಿನಿಧಿಗಳು, ಗಣ್ಯರು ಭಾಗವಹಿಸುವರು.
ಮುತ್ತಣ್ಣ ಗದಾಡಿ ಜಾತ್ರೆ ನಿಮಿತ್ಯ ೩ ದಿನಗಳ ಕಾಲ ಅನ್ನ ಸಂತರ್ಪಣೆ ಮಾಡಿದ್ದಾರೆ. ಈ ಸಮಯದಲ್ಲಿ ಗ್ರಾಪಂ. ಅಧ್ಯಕ್ಷ ಬಸವರಾಜ ಬುಜನ್ನವರ, ಭರಮಪ್ಪ ಆಶಿರೋಟ್ಟಿ, ಬಸವರಾಜ ಗಾಡವಿ, ಭೀಮಪ್ಪ ದೇವರಮನಿ, ಲಕ್ಷ್ಮಣ ಗಂದಾಪ್ಪಗೋಳ, ಕಲ್ಲೋಳೆಪ್ಪ ಬಂಡ್ನಿಂಗೋಳ, ನಿಂಗಪ್ಪ ತೋಳಿ, ಈಶ್ವರ ಗಾಡವಿ ಉಪಸ್ಥಿತರಿದ್ದರು.

