ಹೃದಯ ವೀಣೆ
ಶುರುವಾಗಿದೆ
ಆಸೆಗಳ ಆಂದೋಲನ
ಅತಿಯಾಗಿ
ಹೇಳಲಾಗದೆ
ಉಳಿದಿವೆ ಅದೆಷ್ಟೋ
ಮಾತುಗಳು
ಮುದುರಿ ಹೋಗಿವೆ
ಎದೆಯ ಗೂಡೊಳಗೆ
ಬಂದೊಮ್ಮೆ ಮೀಟು
ಹೃದಯ ವೀಣೆ
ಕಾಯುತಿವೆ ನಿನ್ನ
ಬರುವಿಗಾಗಿ ಭಾವಲತೆಗಳು
ನೀ ಬಂದು ಸಂತೈಸು
ಮಿಡಿಯುವ ಮನವ
ಬಂದುಬಿಡೊಮ್ಮೆ
ಅಂತರಂಗದ ಹೂ ಬನಕೆ
ಮಧುವರಿಸಿ ಬರುವ
ದುಂಬಿಯಂತೆ
ಮಿಲನವಾಗಲಿ
ಮಧುರ ಪ್ರೇಮಕಾವ್ಯ
ಕಾಯುತಿದೆ ಮನವು
ಬಾಹುಬಂಧನದ ಬೆಸುಗೆ
ತವಕದ ತಲ್ಲಣಕೆ
ಮುನಿಸದೆ
ಕಟ್ಟಿ ಬಿಡು
ಹೃದಯಕ್ಕೆ ಸೇತುವೆ
________________________
*ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ*

