ಸಿಂದಗಿ; ಭಾರತ ದೇಶ ಪ್ರಾಚೀನ ಕಾಲದಿಂದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿತ್ತು ಆದರೆ ಇಂದು ಭಾರತ ದೇಶ ಸನಾತನ, ಪ್ರಾಚೀನ ಸಂಸ್ಕೃತಿಯನ್ನು ಮರೆತುಹೋಗಿದೆ ಅದಕ್ಕೆ ಹಿಂದೂ ಧರ್ಮ ಜಾಗೃತಿ ಅತ್ಯವಶ್ಯಕವಾಗಿದೆ ಕಾರಣ ದಿ. ೩೧ ರಂದು ಮಧ್ಯಾಹ್ನ ೩ ಗಂಟೆಗೆ ನಡೆಯುವ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಜಾಗೃತಿ ಬೃಹತ್ ಹಿಂದೂ ಸಮ್ಮೇಳನದ ಶೋಭಾಯಾತ್ರೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಅಧ್ಯಕ್ಷ ಎಸ್.ಎಸ್ ಪಾಟೀಲ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೃಹತ್ ಹಿಂದೂ ಸಮ್ಮೇಳನದ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ದೇಶ ವಿಶ್ವದ ಗುರುವಾಗಬೇಕು ಎನ್ನುವ ಭಾವನೆಗಳು ಮೂಡಬೇಕಾದರೆ ಎಲ್ಲ ಸಮಾಜಗಳು ತಮ್ಮ ತಮ್ಮ ಸಂಸ್ಕೃತಿಗಳನ್ನು ಆಚರಣೆಗಳ ಮಧ್ಯದಲ್ಲಿಯೂ ನಾವೆಲ್ಲ ಹಿಂದೂ ಒಂದು ಎನ್ನುವ ಸಂದೇಶ ರವಾನೆಯಾಗಬೇಕಾಗಿದೆ ಎಂದರು.
ಧರ್ಮ ಜಾಗರಣಾ ವೇದಿಕೆಯ ಅಶೋಕ ಅಲ್ಲಾಪುರ ಮಾತನಾಡಿ, ಈ ಕಾರ್ಯಕ್ರಮವು ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ದಿವ್ಯ ಸಾನ್ನಿಧ್ಯದಲ್ಲಿ ಊರಿನ ಹಿರೇಮಠದ ಶಿವಾನಂದ ಶಿವಾಚಾರ್ಯರು, ಸದ್ಗುರು ಭೀಮಾಶಂಖರ ಮಠದ ದತ್ತ ಯೋಗೇಶ ಸ್ವಾಮಿಜಿ, ರಾಘವೇಂದ್ರ ಮಠದ ವಿಠಲಾಚಾರ್ಯ ಆರ್ಯಂ, ಶಾಂತಗಂಗಾಧರ ಮಹಾಸ್ವಾಮಿಗಳು, ರಾಮಚಂದ್ರ ಮಹಾಸ್ವಾಮಿಗಳು, ಆದಿಶೇಷ ಸಂಸ್ಥಾನಮಠದ ಡಾ.ಚಂದ್ರಶೇಖರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಿವೃತ್ತ ಪ್ರಾಚಾರ್ಯ ಎಸ್.ಎಸ್.ಪಾಟೀಲ ಅದ್ಯಕ್ಷತೆಯಲ್ಲಿ ಧರ್ಮ ಜಾಗರಣಾ ವೇದಿಕೆಯ ಕರ್ನಾಟಕ ಉತ್ತರ ಪ್ರಾಂಥ ಕಾರ್ಯಕಾರಿಣಿ ಸದಸ್ಯ ಮುಖ್ಯ ವಕ್ತಾರ ಹಣಮಂತ ಮಳಲಿ, ಡಾ. ಶಾರದಾ ನಾಡಗೌಡ ಸೇರಿದಂತೆ ೪೦ಕ್ಕೂ ಹೆಚ್ಚು ಸಮಾಜದ ಅಧ್ಯಕ್ಷರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ ಕಾರಣ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಜಂಗಮ ಸಮಾಜದ ಅಧ್ಯಕ್ಷ ಶಂಕ್ರಲಿಂಗಯ್ಯ ಹಿರೇಮಠ ಮಾತನಾಡಿ, ಜಾತಿಗೊಂದು ಗುರುಗಳನ್ನು ಸೃಷ್ಠಿ ಮಾಡಿಕೊಂಡು ಧರ್ಮ ಜಾಗೃತಿ ನಡೆಯುತ್ತಿಲ್ಲ ಕಾರಣ ಧರ್ಮ ಜಾಗೃತಿಗೆ ಎಲ್ಲರು ಒಂದಾಗುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ರೆಡ್ಡಿ ಸಮಾಜದ ಅದ್ಯಕ್ಷ ಭೀಮನಗೌಡ ಪಾಟೀಲ, ಗೊಲ್ಲರ ಸಮಾಜದ ಅದ್ಯಕ್ಷ ಅರ್ಜುನ ಹಡಗಲಿ, ಭೋವಿ ವಡ್ಡರ ಸಮಾಜದ ಪಂಡಿತ ಯಂಪೂರೆ, ತಳವಾರ ಮಹಾಸಭಾದ ಅದ್ಯಕ್ಷ ಪರಸುರಾಮ ಗೂಳೂರ, ಬಜಂತ್ರಿ ಸಮಾಜದ ಅದ್ಯಕ್ಷ ಭೀಮಾಶಂಕರ ಬಜಂತ್ರಿ, ಶಿವಶಿಂಪಿ ಸಮಾಜದ ಅದ್ಯಕ್ಷ ವಿಶ್ವಾರಾಧ್ಯ ಶಿವಶಿಂಪಗೇರ, ಉಪ್ಪಾರ ಸಮಾಜದ ಚಂದ್ರಕಾಂತ ಉಪ್ಪಾರ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಅವಧೂತ ಜೋಶಿ, ಡೋಹರ ಸಮಾಜದ ಅಧ್ಯಕ್ಷ ಅಂಬವರೀಶ ಚೌಗಲೆ, ಬಣಗಾರ ಸಮಾಜದ ಅಧ್ಯಕ್ಷ ಚಂದ್ರಶೇಖರ ಗೂಳಿ, ಕಾರ್ಯದರ್ಶಿ ರಾಜಶೇಖರ ಬಿರಾದಾರ, ಕೋಶಾಧ್ಯಕ್ಷ ಬಸವರಾಜ ಗೌಂಡಿ ಸೇರಿದಂತೆ ಅನೇಕರಿದ್ದರು.

