ಕವನ : ದೈವಿಕ ಶಿಕ್ಷಕರು

Must Read

ದೈವಿಕ ಶಿಕ್ಷಕರು

ಇವರು ದೈಹಿಕ ಶಿಕ್ಷಣ ಶಿಕ್ಷಕರಲ್ಲ ಇವರು ದೈವಿಕ ಶಿಕ್ಷಕರು
ಇವರು ಜೀವನ ಕೌಶಲ ಕಲಿಸುವ ಜೀವನದ ಶಿಕ್ಷಕರು ||ಪ||

ನಾಲ್ಕು ಗೋಡೆಯ ಪಾಠಕೆ ಸೀಮಿತವಲ್ಲ ಈ ಕಲಿಕೆ
ಆಟದ ಮೈದಾನದಿ ಮೂಡಿಸುವರು ಬದುಕಿನ ನಂಬಿಕೆ
ಸೋಲು-ಗೆಲುವಿನ ಲೆಕ್ಕಾಚಾರವ ಸಮವಾಗಿ ತೂಗುವರು
ದೈಹಿಕ ಶಿಕ್ಷಣ ಶಿಕ್ಷಕರು, ಬಲಿಷ್ಠ ಸಮಾಜವ ಕಟ್ಟುವರು ||೧||

ಯೋಗ, ವ್ಯಾಯಾಮ, ನೃತ್ಯಗಳ ಇಂಪಾದ ಸಂಗಮ
ಸಂತುಲಿತ ಆಹಾರ, ಶಿಸ್ತುಬದ್ಧ ಜೀವನದ ನಿಯಮ
ದೇಹಕೆ ಶಕ್ತಿ, ಮನಸಿಗೆ ಶಾಂತಿ, ಸಂತಸ ತುಂಬಿದ ಆಟ
ವಿದ್ಯಾರ್ಥಿಗಳ ಬಾಳಲಿ ಇವರದು ಅಳಿಸಲಾಗದ ಪಾಠ ||೨||

ದೇಶಪ್ರೇಮ, ಸಹಬಾಳ್ವೆ ಭಾವೈಕ್ಯತೆಯ ಮಹಾಮಂತ್ರ
ಆಧುನಿಕ ಯುಗದಿ ದೈಹಿಕ ಶ್ರಮವೇ ಆರೋಗ್ಯದ ತಂತ್ರ
ಸುರಕ್ಷತೆಯ ಪಾಠದೊಂದಿಗೆ ಪ್ರಥಮ ಚಿಕಿತ್ಸೆಯ ಅರಿವು
ಸತ್ಪ್ರಜೆಯಾಗಿ ರೂಪಿಸುವಲಿ ಇವರದೇ ಮಹತ್ತರ ನೆರವು ||೩||

ಕ್ರೀಡಾಕೂಟದಲಿ ಸಂಭ್ರಮ, ಸ್ಪರ್ಧೆಯಲಿ ಉತ್ಸಾಹ
ಕುಗ್ಗಿದ ಮನಸಿಗೆ ತುಂಬುವರು ಹೊಸದೊಂದು ಪ್ರವಾಹ
ದೈಹಿಕ, ಮಾನಸಿಕ, ಸಾಮಾಜಿಕ ಏಳಿಗೆಯ ರೂವಾರಿ
ದೈಹಿಕ ಶಿಕ್ಷಣ ಗುರುಗಳೇ ನಮಗೆ ದಾರಿದೀಪ, ಮಾದರಿ ||೪||

ಡಾ. ಸುನೀಲ ಪರೀಟ
ಹಿರಿಯ ಭಾಷಾ ಶಿಕ್ಷಕರು ಹಾಗೂ ಸಾಹಿತಿಗಳು
ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು
ಸಾಂಬರಾ ಬೆಳಗಾವಿ

LEAVE A REPLY

Please enter your comment!
Please enter your name here

Latest News

ಪ್ರಕೃತಿ ಮತ್ತು ಪ್ರೀತಿಯ ಅದ್ಭುತ ಸಂಗಮ: ಮೇಘದೂತದ ಮಹತ್ವ ವಿವರಿಸಿದ ಪ್ರೊ. ನಾರಾಯಣಘಟ್ಟ

    ಕಾಳಿದಾಸನ ಮೇಘದೂತ ಪ್ರಕೃತಿ ಹಾಗೂ ಶುದ್ಧ ಪ್ರೀತಿಯ ಅದ್ಭುತ ಕಾವ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೊ. ನಾರಾಯಣಘಟ್ಟ ಹೇಳಿದರು. ...

More Articles Like This

error: Content is protected !!
Join WhatsApp Group