ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮ ಅಕ್ಷರಶಃ ನಡುಗಿಹೋಗಿದೆ. ಒಂದಲ್ಲ, ಎರಡಲ್ಲ.. ಬರೋಬ್ಬರಿ ಐದು ಬಾರಿ ಸಂಭವಿಸಿದ ನಿಗೂಢ ಸ್ಫೋಟ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಈ ಘೋರ ದುರಂತದಲ್ಲಿ ಆರು ಶಾಲಾ ಮಕ್ಕಳು ಸೇರಿದಂತೆ ಎಂಟು ಜನರು ಗಾಯಗೊಂಡಿದ್ದು, 6 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದರೆ, ಇಬ್ಬರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಏನಿದು ಸ್ಫೋಟದ ರಹಸ್ಯ..?
ಪೊಲೀಸರ ತನಿಖೆಯಲ್ಲಿ ಬಯಲಾದ ಸತ್ಯಾಂಶ ಏನು.. ಎಂಬುದರ ಕುರಿತಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಮೊಳಕೇರಾ ಗ್ರಾಮದಲ್ಲಿ ನಿಗೂಢ ಸ್ಫೋಟಗಳಾಗಿದ್ದು, 6 ಶಾಲಾ ಮಕ್ಕಳು ಸೇರಿ 8 ಜನರಿಗೆ ಗಾಯ. ಒಂದೇ ಸ್ಥಳದಲ್ಲಿ 5 ಬಾರಿ ಸರಣಿ ಸ್ಫೋಟ ನಡೆದಿವೆ. ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಘಟನೆಯ ಬಗ್ಗೆ ಮಾತನಾಡಿ
ಕೆಮಿಕಲ್ ಪೇಂಟ್ನಿಂದ ಘಟನೆ ನಡೆದಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ಹೇಳಿದ್ದಾರೆ
ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್, ತಜ್ಙರ ತಂಡ ಪರಿಶೀಲನೆ ನಡೆಸಿತು.
ಬೆಳ್ಳಂಬೆಳಗ್ಗೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಸ್ಪೋಟಗೊಂಡ ಸದ್ದು, ಇಡೀ ಗ್ರಾಮಸ್ಥರನ್ನ ಬೆಚ್ಚಿ ಬೀಳಿಸಿತ್ತು. ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನದ ರಸ್ತೆಯಲ್ಲಿರುವ ಸಂಗಾದೇವರ ದೇವಸ್ಥಾನದ ಬಳಿ ನಡೆದ ಬೆಳಿಗ್ಗೆ 8-30 ಸುಮಾರಿಗೆ ನಡೆದ ಸ್ಪೋಟದಲ್ಲಿ 8 ಜನರು ಗಂಭೀರ ಗಾಯಗೊಂಡಿದ್ದಾರೆ. 6 ಜನ ಶಾಲಾ ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, 4 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಬ್ಬಾರ್ (70), ಅನ್ವರ್ (18), ಅರ್ಜಾರ್ (8), ಆರೀಷ್ (6), ಮಸ್ತಾನ್ (8), ಬುಷೇರಾ (ಗರ್ಲ್) (3). ಗಂಭೀರ ಗಾಯಗೊಂಡ ಇಬ್ಬರನ್ನ ಹೈದರಾಬಾದ್ ಹಾಗು ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನು ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ಭೀಕರತೆ ಬಿಚ್ಚಿಟ್ಟಿದ್ದು, ಸ್ಪೋಟದಲ್ಲಿ ಇಬ್ಬರು ಶಾಲಾ ಮಕ್ಕಳು ಮೇಲಿಂದ ಹಾರಿ ಬಿದ್ದಿದ್ದಾರೆ, ಅವರ ಬಟ್ಟೆಗಳೆಲ್ಲಾ ಛಿದ್ರ ಛಿದ್ರವಾಗಿ ಬಿದ್ದದ್ದವು. ಸ್ಪೋಟ ಪ್ರಕರಣ ಇದೇ ಮೊದಲಲ್ಲಾ, ಈ ಹಿಂದೆಯೂ ಇದೇ ರೀತಿ ಸ್ಫೋಟ ಆಗಿವೆ. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಆಗಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

