ನಿನ್ನಿಂದ ನಗಬೇಕು
____________________
ನಿನ್ನ ಸುತ್ತ
ನೂರು ಜನರು
ನಿನ್ನಿಂದ ನಗಬೇಕು
ಹೊರತು
ನಿನ್ನ ನೋಡಿ ಅಲ್ಲ
ನಗೆ ಮಲ್ಲಿಗೆ
ಹಂಚಿ ಬಿಡು
ಯಾರಾದರೂ ಅತ್ತರೆ
ನಿನಗಾಗಿ ಅಳಬೇಕೆ
ಹೊರತು
ನಿನ್ನಿಂದಲ್ಲ
ಅಳು ನೋವು
ನೀಡದಿರು
ನೀನು ನಕ್ಕಾಗ
ಅವರು ನಕ್ಕು
ನೀನು ಅತ್ತಾಗ
ಅವರು ಅತ್ತರೆ
ಅದುವೇ ಸ್ನೇಹ
ಪ್ರೀತಿ ಜೀವನ
ನಕ್ಕು ಬಿಡು
ನಿನ್ನ ನೋವು
ಮರೆತು
____________________
ಮುಗಿಸಿ ಹೊರಡು
___________________
ತನು ಮನ
ಭಾವಗಳ
ತಳಕಾಟ
ಅತ್ತ ಇತ್ತ
ಹೊಯ್ದಾಟ
ಚಿತ್ತ ಚಂಚಲ
ತೀವ್ರ ಚೆಲ್ಲಾಟ
ಮನವಿದು
ಮಹಾದೇವನ
ಮಾಟ
ಆತ್ಮ ಕಾಯ
ಪ್ರಾಣಗಳ ಕೂಟ
ಮುಗಿಸಿ ಹೊರಡು
ಭೂಮಿ ಬಿಟ್ಟು
ಸಾಕು ಅವರಿವರ
ಕಾಟ
_____________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

