ಬದುಕಿನ ನೆಲೆಗಟ್ಟನ್ನು ಮಿತ್ರ ಸಂಮಿತ ಕೃತಿಯಲ್ಲಿ ತಿಳಿಯಬಹುದು

Must Read

ಮೂಡಲಗಿ : ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ ನಡೆದ ಕವಿ ಮನೆಯೊಳ್ ಕಾವ್ಯಾವಲೋಕನ ಎಂಬ ಕಾರ್ಯಕ್ರಮದಲ್ಲಿ ಡಾ.ಮಹದೇವ ಜಿಡ್ಡಿಮನಿಯವರ ಮಿತ್ರ ಸಂಮಿತ ಕಾವ್ಯ ಕೃತಿಯ ಕಾವ್ಯಾವಲೋಕನ ಮಾಡಿದ ದುರ್ಗಪ್ಪ ದಾಸನವರ ಉದಯೋನ್ಮುಖ ಸಾಹಿತಿಗಳು ಹೊಸಟ್ಟಿ ಇವರು ಮಿತ್ರ ಸಂಮಿತ ಕೃತಿಯು ಸಹೃದಯ ಓದುಗನು ಅದನ್ನು ಓದಿದಾಗ ಅದರ ಪರಿಮಳವನ್ನು ಆಸ್ವಾದಿಸಬಹುದು ಎಂದು ಮಾರ್ಮಿಕ ನೆಲೆಗಟ್ಟಿನಲ್ಲಿ ಹೇಳಿದರು.

ಇಲ್ಲಿ ಕವಿ ಅತ್ಯಂತ ಕ್ರಿಯಾಶೀಲ ಚಿಂತನೆಗಳೊಂದಿಗೆ ಹಾಗೂ ಕಾವ್ಯ ರಚನಾ ಪ್ರಾವೀಣ್ಯತೆಯನ್ನು ಪ್ರಚುರ ಪಡಿಸುವ ಮೂಲಕ ಓರ್ವ ಲಾಕ್ಷಣಿಕರಾಗಿ ಗುರುತಿಸಿಕೊಳ್ಳುಸುವರು. ಷಟ್ಪದಿ, ರಗಳೆ,ಶ್ಲೇಷಗಳ,ಉಪಮೇಯಗಳನ್ನು ಬಳಕೆಯನ್ನು ಈ ಕಾವ್ಯ ಕೃತಿಯನ್ನು ಓದುತ್ತಾ ಹೋದಂತೆ ತಿಳಿಯುತ್ತದೆ .ಈ ಸಮಾಜದಲ್ಲಿ ಬದುಕುವ ನೆಲೆಗಟ್ಟನ್ನು ಆಧ್ಯಾತ್ಮಿಕ ತತ್ವಗಳನ್ನು ಕಾವ್ಯದಲ್ಲಿ ತಿಳಿಯಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ  ಸುರೇಶ ಲಂಕೆಪ್ಪನವರ ಕವಿ ಮನೆ ಒಳಗೆ ಕಾವ್ಯವನ್ನು ಆಸ್ವಾದಿಸುವುದು ಒಂದು ಹೊಸ ಅನುಭವದ ಜೊತೆಗೆ ಕಾವ್ಯ ಪ್ರೇಮವನ್ನು ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಮೂಡಲ ನಾಡಿನ ಎಲ್ಲ ಕವಿಗಳಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ವೇದಮೂರ್ತಿ ಶ್ರೀ ವೀರಯ್ಯ ಮಹಾಸ್ವಾಮಿಗಳು ಪಾಲಭಾಂವಿ ಇವರು ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕ ಕವಿ ಮನೆಯಲ್ಲಿ ಎಲ್ಲ ಸಹೃದಯರನ್ನ ಕೂಡಿಸಿಕೊಂಡು ಕವಿಯ ಕಾವ್ಯದ ಗರಿಮೆಯನ್ನ ಹೆಚ್ಚಿಸುತ್ತಿರುವುದು ತುಂಬಾ ಶ್ಲಾಘನೀಯ ಹಾಗೂ ಇದು ಅನವರತ ಮುಂದುವರೆಯಲಿ ಎಂದು ಆಶೀರ್ವದಿಸಿದರು.

ಮಿತ್ರ ಸಂಮಿತ ಕಾವ್ಯ ಕೃತಿಯ ಕವಿಗಳಾದ ಡಾ. ಮಹದೇವ ಜಿಡ್ಡಿಮನಿ ಅವರು ಮಾತನಾಡಿ ಸಹೃದಯರು ಕವಿಮನೆಗೆ ಬಂದು ಕವಿಯ ಭಾವನೆಗಳನ್ನು ಕಾವ್ಯದ ಉದ್ದೇಶವನ್ನು ತಿಳಿದುಕೊಳ್ಳುವಂತ ಈ ಕಾರ್ಯಕ್ರಮ ನಿಜಕ್ಕೂ ಸಂತಸ ತರಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚು.ಸಾ.ಪ ಅಧ್ಯಕ್ಷರಾದ  ಚಿದಾನಂದ ಹೂಗಾರ ಅವರು ಕವಿಯ ಸಾಹಿತ್ಯವನ್ನ ಸಮಾಜಕ್ಕೆ ಮುಟ್ಟಿಸುವಲ್ಲಿ ಹಾಗೂ ಕವಿಮನೆಗೆ ಭೇಟಿ ನೀಡುವ ಮೂಲಕ ಕಾವ್ಯವನ್ನ ಅವಲೋಕಿಸಿ ಸಹೃದಯರಿಗೆ ಮುಟ್ಟಿಸುವ ಈ ಕಾರ್ಯಕ್ರಮ ಪ್ರತಿ ತಿಂಗಳು ನಡೆಯುತ್ತದೆ ಎಂದು ತಿಳಿಸಿದರು. ಮಹಾವೀರ ಸಲ್ಲಾಗೋಳ ಆರಂಭದಲ್ಲಿ ಕವಿ ಪರಿಚಯವನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಕ.ಸಾ.ಪ ಅಧ್ಯಕ್ಷರಾದ ಡಾ|| ಸಂಜಯ ಶಿಂಧಿಹಟ್ಟಿ, ನಿಕಟ ಪೂರ್ವ ಕ.ಸಾ.ಪ ಅಧ್ಯಕ್ಷರಾದ ಸಿದ್ರಾಮ ದ್ಯಾಗಾನಟ್ಟಿ, ಎ ಎಚ್ ವಂಟಗೋಡಿ, ಬಸವರಾಜ ತರಕಾರ, ಭೀಮಪ್ಪ ಶಿವಾಪುರ, ಆರ್ .ಟಿ, ಲಂಕೆಪ್ಪನವರ,ಶಿವಲಿಂಗ ಪಾಟೀಲ, ಎಸ್. ಎಂ. ಕಮದಾಳ, ಬಸವಂತಪ್ಪ ಮಂಗಿ, ಬಾಳಪ್ಪ ನಂದಿ, ಶಿವರಾಜ ಕಾಂಬಳೆ, ಸಿದ್ದಣ್ಣ ನಡಗಡ್ಡಿ, ಗಣಪತಿ ಖಾನಟ್ಟಿ ತೇರದಾಳ ಸರ್,ಮಳಲಿ ಸರ್,ಯಂಡ್ರಾವಿ ಸರ್, ವ್ಯಾಪಾರಿ ಸರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುತ್ತಪ್ಪ ಲಂಗೂಟಿ ಕಾರ್ಯಕ್ರಮ ನಿರೂಪಿಸಿದರು.ಯಲ್ಲಪ್ಪ ಭೂಸಗೊನ್ನ ವಂದಿಸಿದರು.

LEAVE A REPLY

Please enter your comment!
Please enter your name here

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group