ಎಡಗೈ ಶಕ್ತಿ
ಬಲಕ್ಕಿಲ್ಲದ ವೇಗ, ಎಡಕ್ಕಿಹುದು ನೋಡಿ
ಯುವರಾಜ್ ಸಿಂಗ್ ನ ಬ್ಯಾಟಿಂಗ್ ಶಕ್ತಿಯಲ್ಲಿ ಹರಿಯಿತು ರನ್ ಮಳೆ
ಎಡಗೈಯ ಸವಿನಯ ನಗು ಎಲ್ಲರನು ಮೋಡಿಮಾಡಿದಾಗ
ಜಗವೆಲ್ಲ ಕೊಂಡಾಡಿತು ಸಾಧನೆಯನು
ವಿಷ್ಣುವರ್ಧನ್ ಎಡಗೈ ಯಲಿ ಹಾಕಿರುವ ಕಡಗ ಕೈ ಮುಷ್ಟಿ ಮಾಡಿ
ಈ ಕೈ ಕರ್ನಾಟಕದ ಕೈ
ಎಂಬ ಅಭಿಮಾನದ ಮಾತುಗಳ
ನುಡಿಯುವಾಗ ಅಭಿಮಾನದ ಚಪ್ಪಾಳೆ ಕರತಾಡನದ ಸದ್ದು
ಹೃದಯಕ್ಕೆ ಹತ್ತಿರದ ಈ ಎಡಗೈ,
ಜೀವನಪೂರ್ತಿ
ಎಡಗೈ ಯಲಿ ಎಲ್ಲರನು ಮೆಚ್ಚಿಸುವ ಶಕ್ತಿ ಇರುವದು
ನಮಗೆ ಜೊತೆಯಾಗುವ ಅಮ್ಮನ ಕೈ.
ತುತ್ತು ಕೂಡ ಪ್ರೀತಿಯ ಎಡಗೈ
ಮೆಚ್ಚುಗೆಯಿರಲಿ ಎಡಗೈಗೆ,
ಬೆಳಿಗ್ಗೆ ಎದ್ದ ಕ್ಷಣ ಕೈ ಉಜ್ಜಿ
ನೋಡಿಕೊಳ್ಳುವಾಗ ಸಮಾಂತರ
ಎರಡೂ ಕೈಗಳಲಿ ದೇವತಾ
ಸ್ವರೂಪ ಇರುವುದೆಂಬ ನಂಬಿಕೆ
ಇಲ್ಲಿರುವ ಸಮಾನತೆ ಎರಡೂ
ಕೈಗಳು ಕಾರ್ಯ ಮಾಡುವಾಗ
ಅಂತರ ಬೇಡ
ನಮಗಿರುವ ಕೈಗಳು ನಮ್ಮ ಕಾರ್ಯ ಮಾಡಲು ದೇವರು ಕೊಟ್ಟ ಸದವಕಾಶ
ಬೇದಭಾವ ತೋರದಿರಿ
ನಂದಿನಿ. ಸನಬಾಳ
ಅಧ್ಯಕ್ಷರು
ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ
ಕಲಬುರಗಿ ಜಿಲ್ಲಾ ಘಟಕ

