ಮಡಿವಾಳ ಮಾಚಿದೇವರ ಜಯಂತಿ
ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು ಸತತ ಓದುವ ಮೂಲಕ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದು ಉಪ ತಹಶೀಲ್ದಾರ ಇಂದ್ರಬಾಯಿ ಬಳಗಾನೂರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ರವಿವಾರರಂದು ಶ್ರೀ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸದಲ್ಲಿ ಅವರು ಮಾಚಿದೇವರ ಭಾವ ಚಿತ್ರಕ್ಕೆ ಪೂಜಾ ನೆರವೇರಿಸಿ ಅವರು ಮಾತನಾಡಿ ಕಲ್ಯಾಣ ಕ್ರಾಂತಿ ಬಳಿಕ ಎಲ್ಲ ಶರಣರ ವಚನಗಳು ಸಂರಕ್ಷಿಸಿಸುವಲ್ಲಿ ಶರಣ ಮಡಿವಾಳ ಮಾಚಿದೇವರ ಪಾತ್ರ ಶ್ಲಾಘನೀಯವಾದದು ಎಂದು ಬಣ್ಣಿಸಿದರು.
ವಿಶ್ರಾಂತ ಗ್ರಂಥಪಾಲಕ ಸಿದ್ದಬಸವ ಕುಂಬಾರ ಮಾತನಾಡಿ ಮಡಿವಾಳ ಮಾಚಿದೇವರು ಶರಣರ ವಚನಗಳು ರಕ್ಷಣೆ ಮಾಡಿರುವ ಕಿರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಮಡಿವಾಳ ಸಮಾಜದ ಮುಖಂಡ ಹಿರಿಯ ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ. ಕುಮಾರಿ ಬಿಂದು ತಿಪ್ಪಣ್ಣ ಅಗಸರ .ಸಾಹಿತಿ ಕವಿ ಕಲಾವಿದ ಮುತ್ತು ಬ್ಯಾಕೋಡ
ಮಾತನಾಡಿದರು.
ಮಡಿವಾಳ ಸಮಾಜದ ತಾಲೂಕಾ ಅಧ್ಯಕ್ಷ ಗುರು ಅಗಸರ, ಗೊಲ್ಲಾಳ ಅಗಸರ, ಈರಣ್ಣ ಅಗಸರ, ಯರಗಲ್ಲ, ಬಸವರಾಜ ಅಗಸರ, ವಿಜಯಕುಮಾರ ಅಗಸರ, .ಬಸವರಾಜ ಗುತ್ತರಗಿ, ಪತ್ರಕರ್ತ ವಿನಯಕುಮಾರ ಅಗಸರ, ಶಂಕರ ಅಗಸರ, ಮಲ್ಲು ಅಗಸರ ಬಂದಾಳ, ತಿಪ್ಪಣ ಅಗಸರ, ಶರಣು ಅಗಸರ, ಮಲ್ಲು ಅರಳಗುಂಡಗಿ, ಮಡು ಮಡಿವಾಳರ ಹಾಗೂ ಮಡಿವಾಳ ಸಮಾಜದ ಮುಖಂಡರು ಭಾಗವಹಿಸಿದರು.

