ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಜಿಲ್ಲಾ ಘಟಕ ಬೆಳಗಾವಿ ಇವರ ವತಿಯಿಂದ ಬೆಳಗಾವಿ ನಗರದ ಮಹಾಂತೇಶ ನಗರ, ಮಹಾಂತ ಭವನದಲ್ಲಿ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ ಸಮಾರಂಭ ನಡೆಯಿತು ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಕಾರ್ಯಕ್ರಮ ಉದ್ಘಾಟಸಿದರು.
ಹಿರಿಯ ಸಾಹಿತಿಗಳು ಶ್ರೀಮತಿ ಹೇಮಾವತಿ ಸೊನೊಳ್ಳಿ ಸರ್ವಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ.ವೈ. ಮೆಣಸಿನಕಾಯಿ ಹಿರಿಯ ಸಾಹಿತಿಗಳು ಶ್ರೀಮತಿ ರೇಖಾ ಅಂಗಡಿ ದಳವಾಯಿ ಶಿಕ್ಷಕರ ಸಂಘದ ಗ್ರಾಮೀಣ ಅಧ್ಯಕ್ಷ ಚಂದ್ರಶೇಖರ ಕೋಲಕಾರ ಸುನೀಲ ಪರಿಟ್, ಶಿಕ್ಷಕರ ಸಂಘಗಳ ಪರಿಷತ್ ರಾಜ್ಯಾಧ್ಯಕ್ಷ ಸಂಗಮೇಶ ಖನ್ನಿನಾಯ್ಕರ, ಸರಕಾರಿ ಎಸ್. ಸಿ, ಎಸ್ಟಿ ಸಮಾನ ಮನಸ್ಕ ಶಿಕ್ಷಕರ ವೇದಿಕೆ ಅಧ್ಯಕ್ಷರು ಸುಮಾ ದೊಡಮನಿ ಬರಹಗಾರರ ಸಂಘದ ಗ್ರಾಮೀಣ ಅಧ್ಯಕ್ಷೆ ಎಸ್. ಎನ್. ಉಪ್ಪಿನ, ಸಾವಿತ್ರಿ ಬಾಯಿ ಫುಲೆ ಸಂಘದ ಗ್ರಾಮೀಣ ಅಧ್ಯಕ್ಷೆ ಶ್ಯಾಮಲಾ ಪಾಟೀಲ, ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷೆ ಚಾಂದಬಿ ಕಲಾಲ, ಪಮ್ಮಾರ್, ವಿಕಲ ಚೇತನ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಠಲ ಯಕಾಜ್ನವರ ಆಗಮಿಸಿದ್ದರು.
ಇದೇ ಸಂದರ್ಭ ರಾಜ್ಯಾಧ್ಯಕ್ಷ ಮಧುನಾಯಕ್ ಲಂಬಾಣಿರವರ ಮೂರು ಕೃತಿಗಳು ಬಿಡುಗಡೆಗೊoಡವು. ನಾಡಿನ ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಶಿಕ್ಷಣ ಸಾರಥಿ ಪ್ರಶಸ್ತಿ, ಚಿತ್ರಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಕ್ಕಳ ಸಾಹಿತ್ಯ ಪರಿಷತ್ತಿನ ಮಹಾದೇವಿ ಪಾಟೀಲ ಪ್ರಾರ್ಥನೆ ಮಾಡಿದರು. ಕಲಾವಿದರು ನಾಡಗೀತೆ, ರೈತ ಗೀತೆ, ಹಾಡಿದರು. ಸರಕಾರಿ ಕನ್ನಡ ಮಾದರಿ ಶಾಲೆ ಕಂಗ್ರಾಳಿ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು. ಬರಹಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಗಂಗಮ್ಮ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ಧಿ, ಸಂಘದ ಎಲ್ಲ ಪದಾಧಿಕಾರಿಗಳು ಸದಸ್ಯರು ವಿಜಯಕುಮಾರ ಪುಷ್ಪಾ ಹಿರೇಮಠ್ ಕಂಬಾಲಿಮಠ ಪ್ರವೀಣ್ ಪಾಳೇಕರ್ ನಧಾಫ್ ನಿತಿನ್ ಮೆಣಸಿನ ಕಾಯಿ ಆಗಮಿಸಿದ್ದರು. ಸಾಹಿತಿಗಳು ಕ.ರಾ.ಬ. ಸಂಘದ ಗೌ.ಅಧ್ಯಕ್ಷರು ಗೊರೂರು ಅನಂತರಾಜು ಕಾರ್ಯಕ್ರಮ ಯಶಸ್ವಿಗೆ ಶುಭ ಸಂದೇಶ ಕಳಿಸಿ ಹಾರೈಸಿದರು. ರುದ್ರೇಶ ಬಡಿಗೇರ ವಂದನಾರ್ಪಣೆ ಮಾಡಿದರು.

