ಪಾಪನಾಶ ದೇವಾಲಯ ಪ್ರಕರಣ ; ಏಕವಚನದಲ್ಲಿ ಖಂಡ್ರೆ ನಿಂದಿಸಿದ ಖೂಬಾ

Must Read

ಬೀದರ – ನಗರದ ಪಾಪನಾಶ ದೇವಾಲಯದಲ್ಲಿ ಮಹಾಪೂಜೆ ಕುರಿತಂತೆ ಕೈ ಕಮಲ ಜಟಾಪಟಿಯು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದ್ದು ತಮಗೆ ಶಿವನ ದರ್ಶನಕ್ಕೆ ಅವಕಾಶ ಕೊಡಲಿಲ್ಲವೆಂದು ಭಗವಂತ ಖೂಬಾ ಕೆಂಡಾಮಂಡಲವಾಗಿ ಸಚಿವ ಈಶ್ವರ ಖಂಡ್ರೆಯವರನ್ನು ಹಿಗ್ಗಾ ಮುಗ್ಗಾ ನಿಂದಿಸಿದ್ದಾರೆ.

ಖಂಡ್ರೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಖೂಬಾ ಖಂಡ್ರೆ ಒಬ್ಬ ಹಿಜಡಾ ಎಂಬ ಪದ ಬಳಸಿ ತೀರಾ ಅವಾಚ್ಯ ಪದ ಬಳಕೆಗೆ ಇಳಿದರು.

ಪಾಪನಾಶ ದೇವಾಲಯದ ಅಭಿವೃದ್ಧಿ ಗೆ ಮೋದಿಯವರಿಂದ ತಾನು ಅನುದಾನ ತಂದಿದ್ದು ತಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲವೆಂದು ತೀರಾ ಆಕ್ರೋಶಭರಿತರಾಗಿ ಅವರು ಮಾತನಾಡಿದ ಏಕವಚನದಲ್ಲಿ ಖಂಡ್ರೆಯವರನ್ನು ನಿಂದಿಸಿದರು.

ನಮ್ಮ ಕಾರ್ಯಕರ್ತರ ಕುತ್ತಿಗೆ ಹಿಡಿದು ಬಟ್ಟೆ ಹರಿಯುತ್ತೀರಾ ಎಂದು ಕೆರಳಿದ ಅವರು, ಪಾಪನಾಶ ದೇವರ ದರ್ಶನಕ್ಕೆ ಅಡ್ಡಿಪಡಿಸಿದ ನಿನಗೆ ಶಾಪ ತಟ್ಟುತ್ತದೆ. ಕೇಂದ್ರದ ಅನುದಾನದ ಯೋಜನೆಯಲ್ಲಿ ಸೋನಿಯಾ, ರಾಹುಲ್, ವೇಣುಗೋಪಾಲ್ ಫೋಟೋ ಹಾಕುತ್ತೀಯಾ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಳಸಿಕೊಂಡು ನಮ್ಮನ್ನು ಹತ್ತಿಕ್ಕುತ್ತೀರಾ ನಿಮ್ಮನ್ನು ದೇವರು ಕ್ಷಮಿಸುವುದಿಲ್ಲ ಎಂದು ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಖೂಬಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

LEAVE A REPLY

Please enter your comment!
Please enter your name here

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group