ಬೀದರ – ಶಿವರಾತ್ರಿ ಆಚರಣೆಗೆ ಕೇಳಿದಷ್ಟು ಚಂದಾ ಕೊಡಲಿಲ್ಲವೆಂಬ ಕಾರಣಕ್ಕೆ ಚಂದಾ ವಸೂಲಿ ಮಾಡ್ತಿದ್ದ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆಯಾಗಿದೆ
ಮಹೇಶ್ ಎಂಬ ಯುವಕನ ಕುತ್ತಿಗೆಯ ಹಿಂಭಾಗಕ್ಕೆ ಚಾಕುವಿನಿಂದ ಇರಿತವಾಗಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ
ಬೀದರ್ ನಗರದ ಮೈಲೂರು ಬಡಾವಣೆಯಲ್ಲಿ ನಡೆದ ಘಟನೆ ನಡೆದಿದ್ದು ಶಿವರಾತ್ರಿ ನಿಮಿತ್ತ ಚಂದಾ ಕೊಡುವಂತೆ ವಿದ್ಯಾನಗರ ಬಡಾವಣೆ ಯುವಕರಿಂದ ಬೇಡಿಕೆ ಇತ್ತು ಅಂಗಡಿ ಮಾಲೀಕ ಇಲ್ಲ, ಆಮೇಲೆ ಬನ್ನಿ ಎಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ.
ಗಾಯಗೊಂಡ ಯುವಕ ಮಹೇಶನಿಗೆ ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವಕರು ಹಲ್ಲೆ ಮಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ : ನಂದಕುಮಾರ ಕರಂಜೆ, ಬೀದರ

