ಬೀದರ – ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆ
ಹೌದು ಗಂಡನ ಮನೆಯವರ ಮಾನಸಿಕ ಕಿರುಕುಳದಿಂದಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ ನಡೆದಿದೆ.22 ವರ್ಷದ ಅಂಜನಾಬಾಯಿ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ..

೩ ವರ್ಷಗಳ ಹಿಂದೆ ಮೃತ ಅಂಜನಾಬಾಯಿ ಶೇಖರ್ ಎನ್ನುವವರೊಂದಿಗೆ ಮದುವೆಯಾಗಿದ್ದು ಗಂಡನ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೃತಳ ತಂದೆ ವಿಜಯಕುಮಾರ್ ದೂರು ನೀಡಿದ್ದಾರೆ. ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಪಾನಿಪುರಿ ವ್ಯಾಪಾರ ಮಾಡಿ ಮನೆಗೆ ರಾತ್ರಿ ತಡವಾಗಿ ಬರ್ತಿದ್ದನಂತೆ ಮೃತಳ ಗಂಡ ಶೇಖರ್… ಹೀಗಾಗಿ ರಾತ್ರಿ ಮನೆಗೆ ಬೇಗ ಬನ್ನಿ ಎಂದು ಗಂಡನಿಗೆ ಮೃತ ಅಂಜನಾಬಾಯಿ ಹೇಳುತ್ತಿದ್ದಳಂತೆ ಆದರೆ ಪಾನಿಪುರಿ ವ್ಯಾಪಾರ ರಾತ್ರಿವರೆಗೂ ಆಗುತ್ತೆ ನೀನು ಹೀಗೆ ಇರಬೇಕು ಅಂತಾ ಅತ್ತೆ-ಮಾವ ಜಗಳಾಡುತ್ತಿದ್ದರಂತೆ…. ಮೃತ ಅಂಜನಾಬಾಯಿಗೆ ಗಂಡ ಮತ್ತು ಅತ್ತೆ-ಮಾವ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ
ಇದೆಲ್ಲವನ್ನೂ ತವರು ಮನೆಯವರ ಮುಂದೆ ಮೃತ ಅಂಜನಾಬಾಯಿ ಹೇಳಿಕೊಂಡಿದ್ದಳಂತೆ… ಹೀಗಾಗಿ ಗೃಹಿಣಿ ತಂದೆ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ ಗಂಭೀರ ಆರೋಪ ಮಾಡಿದ್ದಾರೆ… ಅತ್ತೆಗೆ ಬೇರೆಯವರ ಜೊತೆ ಸಂಬಂಧವಿತ್ತು ಇದು ನನ್ನ ತಂಗಿಗೆ ಗೊತ್ತಿತ್ತು ಹೀಗಾಗಿ ತನ್ನ ಅಕ್ರಮ ಸಂಬಂಧ ಹೊರಗೆ ಬರುತ್ತದೆ ಎಂದು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ… ಅತ್ತೆ ಬೇರೆಯವರ ಜೊತೆ ಸಂಬಂದ ಇದ್ದು ನನ್ನ ತಂಗಿಗೂ ವೇಶ್ಯಾವಾಟಿಕೆ ಮಾಡು ಎಂದು ನೇರವಾಗಿ ಹೇಳಿಲ್ಲ ಆದ್ರೆ ಪರೋಕ್ಷವಾಗಿ ಒತ್ತಡ ಇತ್ತು ಎಂದು ನಮಗೆ ಗೊತ್ತು ಎಂದು ಮೃತಳ ಸಹೋದರ ಕಿರಣ ಜಾಧವ ಆರೋಪ ಮಾಡಿದ್ದಾನೆ
ಈ ಕುಟುಂಬ ಮೂಲತಃ ಭಾಲ್ಕಿ ತಾಲೂಕಿನ ಜೋಳದಪಕ್ಕಾ ಗ್ರಾಮದವರಾಗಿದ್ದಾರೆ… ಹೀಗಾಗಿ ಜೋಳದಪಕ್ಕಾ ಗ್ರಾಮದಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದ್ದು ನ್ಯಾಯಕ್ಕಾಗಿ ಪೂಲೀಸರಿಗೆ ಮೊರೆ ಹೋಗಿದ್ದಾರೆ.
ಮಗಳಿಗೆ ಗಂಡನ ಕಡೆಯವರು ಮಾನಸಿಕ ಕಿರುಕುಳ ನೀಡಿದ ಜೊತೆಗೆ ಅತ್ತೆ ಸೊಸೆಗೆ ವೇಶ್ಯಾವಾಟಿಕೆ ಮಾಡುವಂತೆ ಪೀಡಿಸುತ್ತಿದ್ದರು ಎಂದು ಗೃಹಿಣಿ ತಂದೆ ವಿಜಯಕುಮಾರ್ ಎಫ್ ಐಆರ್ ನಲ್ಲಿ ಉಲ್ಲೇಖ ಮಾಡಿದ್ದಾರೆ… ಹೀಗಾಗಿ ಇಂದು ಮಾನಸಿಕ ಕಿರುಕುಳನಾ ಇಲ್ಲಾ ವೇಶ್ಯಾವಾಟಿಕೆ ಹೋಗುವಂತೆ ಕಿರುಕುಳನಾ ಎಂದು ಈಗ ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ೧೧ ತಿಂಗಳ ಮಗು ಅನಾಥವಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

