spot_img
spot_img

ಇಂದು ವಿನಾಯಕ ದಾಮೋದರ ಸಾವರ್ಕರ್ ಅವರ “ಸ್ಮೃತಿ ದಿನ”

Must Read

spot_img
- Advertisement -
  • ಜನನ :- ಮೇ 28, 1883
  • ಮರಣ :- ಫೆಬ್ರವರಿ 26, 1966

ದೇಶಭಕ್ತಿಯ ಮಹಾರ್ಣವದಲ್ಲಿ ಮಿಂದು ಸಹಸ್ರಾರು ತರುಣ ಮನಗಳಲ್ಲಿ ನಾಡಪ್ರೇಮದ ಭಾವತುಂಬಿದ ಆಧುನಿಕ ದಧೀಚಿ , ಶಸ್ತ್ರ – ಶಾಸ್ತ್ರಗಳ ಮಂತ್ರದ್ರಷ್ಟಾರ ವಿಶ್ವಾಮಿತ್ರ ವೀರ ವಿನಾಯಕ ದಾಮೋದರ ಸಾವರ್ಕರ್ , ಸಹಸ್ರಮಾನದ ಕ್ರಾಂತಿಪುಂಜ.

ಮಹಾರಾಷ್ಟ್ರದ ಭಗೂರಿನ ದಾಮೋದರ ಸಾವರ್ಕರ್ – ರಾಧಾಬಾಯಿ ದಂಪತಿಗಳಿಗೆ 1883 ರ ಮೇ 28 ರಂದು ಜನಿಸಿದ ವಿನಾಯಕ ಛಲ -ಸಾಹಸ – ಹೋರಾಟಗಳ ಪರ್ಯಾಯ , ಬದುಕು ಕ್ರಾಂತಿ ಕುಸುಮಗಳ ಸುಂದರಮಾಲೆ . ಹುತಾತ್ಮ ವಾಸುದೇವ ಬಲವಂತ ಫಡಕೆಯ ಪ್ರಚಂಡ ಸಾಹಸ , ಛಾಪೇಕರ್ ಸಹೋದರರ ತ್ಯಾಗ ಸ್ವಾತಂತ್ರ ಯಜ್ಞದ ಸಮಿಧೆಯಾಗುವ ದೃಢಸಂಕಲ್ಪಕ್ಕೆ ನಾಂದಿಯಾಗಿ , ಬ್ರಿಟಿಷ್ ಸರಕಾರದ ಬಂಗಾಲ ವಿಭಜನೆಯ ಪ್ರಯತ್ನ ಅಭಿನವ ಮಿತ್ರಮೇಳಗಳ ಹುಟ್ಟಿಗೆ ಕಾರಣವಾಯಿತು .

ಕಾಂಗ್ರೆಸ್‌ನ ಧರ್ಮ ಸಮನ್ವಯದ ಹಗಲುಗನಸು ದೇಶವಿಭಜನೆಯ ದುರಂತ ಕಥೆಗೆ ನಾಂದಿಹಾಡುತ್ತದೆಯೆಂದು ಎಚ್ಚರಿಸಿ , ಹಿಂದುಗಳು ಸೈನ್ಯಶಕ್ತಿಯ ಭಾಗವಾಗಬೇಕೆಂದು ಅಪೇಕ್ಷಿಸಿ , ಹಿಂದು ನರಮೇಧದ ವಿರುದ್ಧ ಧ್ವನಿಯೆತ್ತಿ , ತುಷ್ಟೀಕರಣ , ಓಲೈಕೆಯ ಮಾರ್ಗದ ಅನಾಹುತದ ಬಗ್ಗೆ ಭವಿಷ್ಯವಾಣಿ ನುಡಿದರು. ಗಾಂಧಿಹತ್ಯೆಯ ನೆಪದಲ್ಲಿ, ಗೃಹಬಂಧನಕ್ಕೀಡಾದ ಸಾವರ್ಕರ್, ‘ನನ್ನ ಜೀವಾವಧಿ ಶಿಕ್ಷೆ’, ‘ಮೋಪ್ಲಾ ದಂಗೆ ‘, ‘ಹಿಂದುತ್ವ ‘ ಕೃತಿಗಳ ಮೂಲಕ ಭಾರತದ ಸಾರ್ವಭೌಮತೆಗೆದುರಾದ ದುಷ್ಟಶಕ್ತಿಗಳ ವಿರುದ್ಧ ದೇಶವಾಸಿಗಳನ್ನೆಚ್ಚರಿಸಿದ ಪುಣ್ಯಾತ್ಮ. ಇಚ್ಚಾಮರಣಿಯಂತೆ 1966 ರ ಫೆಬ್ರವರಿ 26 ರಂದು ಪಂಚಭೂತಗಳಲ್ಲಿ ಲೀನರಾದ ವೀರ ಸಾವರ್ಕರರ ಅಚಲ ರಾಷ್ಟ್ರನಿಷ್ಠೆ , ಉಜ್ವಲ ಸನಾತನತೆ ನಮ್ಮ ಜೀವನಕ್ಕೆ ಬೆಳಕಾಗಲಿ.

- Advertisement -

ಲೇಖಕರಾಗಿ….

  • ಮರಾಠಿ ಕೃತಿಗಳಲ್ಲಿ “ಕಮಲಾ”
  • “ನನ್ನ ಜೀವಾವಧಿ ಶಿಕ್ಷೆ”
  • “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ( ಇದನ್ನು ಬ್ರಿಟಿಷರು ತಮಗನುಕೂಲವಾಗಿ “ಸಿಪಾಯಿ ದಂಗೆ” ಎಂದು ಕರೆದಿದ್ದರು)
  • ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಲಾ ಪಾನಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ)
  • ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು.
  • ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲೊಂದು “ಹಿಂದುತ್ವ”.

ಫೆ.28ಕ್ಕೆ ಕೃತಿ ಲೋಕಾರ್ಪಣೆ

ಸಾವರ್ಕರ್ ಲೇಖನಿಯಿಂದ 20 ಸಾವಿರ ಪುಟಗಳಷ್ಟು ಸಾಹಿತ್ಯ ಉಕ್ಕಿ ಹರಿದಿದೆ.

ಇದೇ 28 ಕ್ಕೆ ಅವರ ಅಂತಿಮ ಕೃತಿ ಲೋಕಾರ್ಪಣೆಯಾಗುತ್ತಿದೆ.

- Advertisement -

“ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು” ಈ ಕೃತಿಯ ಕನ್ನಡ ಅವತರಣಿಕೆ . ತಮ್ಮ ಇಳಿವಯಸ್ಸಿನಲ್ಲಿ 1963 ರಲ್ಲಿ ಮರಾಠಿಯಲ್ಲಿ ರಚಿಸಿದ ಈ ಕೃತಿ ಈಗಾಗಲೇ ಹಿಂದಿ , ಆಂಗ್ಲ ಮತ್ತಿತರ ಭಾಷೆಗಳಲ್ಲಿ ಬಂದಿದೆ .

ಸಾವರ್ಕರ್ ಕುರಿತ ಕೆಲವು ಪ್ರಶ್ನಾವಳಿ

👉Veer Savarkar is also known as ?
– Father Of Hindutva

👉 When was Veer Savarkar born?
– 28th May 1883

👉 What is the full name of Veer Savarkar?
– Vinayak Damodar savarkar

👉 Who founded the Abhinav Bharat Society in Pune?
– Vinayak Damodar Savarkar

👉 Who called the Quit India Movement struggle (in 1942) as “Quit India but keep your army” movement?
– Vinayak Damodar Savarkar

👉 During his teenage, Veer Savarkar organised a youth organisation, what was it’s name?
– Mitra Mela

👉  On which festival did Veer Savarkar burned all the Foreign goods and clothes?
– Dusshera

👉 In which year Veer Savarkar was elected as the president of the Hindu Mahasabha?
– 1934

👉 Which among the following colleges were joined by Veer Savarkar in London?
– Gray’s Inn

👉 Veer Savarkar was sentenced for how many years in Jail?
– 50

👉 When did Veer Savarkar died?
– 26th February 1966

ಸಂಗ್ರಹ: ಎಮ್ ವೈ ಮೆಣಸಿನಕಾಯಿ

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group