ಶಾಸಕ ರಹಿಂ ಖಾನ್ ಪ್ರತಿಮೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬೀದರನ ನಾಗರಿಕರು

Must Read

ಬೀದರ – ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಸಮಸ್ಯೆ ಹೇಳಿಕೊಳ್ಳಲು ಹೋದ ಸುಮಾರು ನಲವತ್ತನಾಲ್ಕು ಜನರ ಮೇಲೆ ಕೇಸು ಮಾಡಿದ ವರಲ್ಲಿ ಹತ್ತು ಜನರಿಗೆ ಜಾಮೀನು ದೊರಕಿದ ಹಿನ್ನಲೆ ಕಳೆದ ರಾತ್ರಿ ನಗರದ ಗವಾನ್ ಚೌಕ ಬಳಿ ಶಾಸಕ ರಹಿಂ ಖಾನ್ ಅವರ ಪ್ರತಿಮೆಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಾದ್ಯಮ ರವರೊಂದಿಗೆ ಮಾತನಾಡಿದ ನಾಗರಿಕರು, ಕಳೆದ ಲಾಕ್ ಡೌನ್ ವೇಳೆಯಲ್ಲಿ ಶಾಸಕರು ನಗರದ ಹಳೆ ಬಡಾವಣೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಬಂದಾಗ ಲಾಕ್ ಡೌನ್ ಸಂದರ್ಭದಲ್ಲಿ ನಮಗೆ ಆಗುತ್ತಿದ್ದ ತೊಂದರೆ ಮತ್ತು ಸಮಸ್ಯೆ ಗಳ ಬಗ್ಗೆ ಚರ್ಚೆ ಮಾಡಲು ನಾವು ಶಾಸಕರ ಬಳಿ ಹೋದಾಗ ನಲವತ್ತನಾಲ್ಕು ಜನರ ಮೇಲೆ ಕೇಸ ಮಾಡಿದರು. ಅದರಲ್ಲಿ ಹತ್ತು ಜನರಿಗೆ ಇಂದು ನ್ಯಾಯಾಲಯವು ಜಾಮೀನು ನೀಡಿದೆ.

ಶಾಸಕ ರಹಿಂ ಖಾನ್ ಜನರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ಸಮಸ್ಯೆಗಳನ್ನು ಹೇಳಿಕೊಂಡು ಹೋದವರ ಮೇಲೆ ಕೇಸ್ ಮಾಡಿದ ದೇಶದಲ್ಲೇ ಮೊದಲ ಶಾಸಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಶಾಸಕರ ಕಚೇರಿ ನಗರ ಪ್ರದೇಶದಲ್ಲಿ ಇರುತ್ತದೆ ಆದರೆ ನಮ್ಮ ಶಾಸಕರ ಕಚೇರಿ ಮೌಜು ಮಸ್ತಿ ಮಾಡುವ ಸ್ಥಳವಾಗಿದೆ.

ನಗರದ ಹೊರಗೆ ತಮ್ಮ ಫಾರ್ಮ್ ಹೌಸ್ ನಲ್ಲಿ ಇದೆಯಲ್ಲದೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೇಳುವುದಕ್ಕೆ ಮನೆಗೆ ಹೋಗುವ ಹಾಗಿಲ್ಲ ಒಂದು ವೇಳೆ ಅವರು ಯಾವುದೇ ಕಾರ್ಯಕ್ರಮದ ನಿಮಿತ್ತ ನಗರದ ಒಳಗಡೆ ಬಂದಾಗ ಭೆಟ್ಟಿ ಮಾಡಲು ಹೋದರೆ ನಮ್ಮ ಕಾರ್ಯಕ್ರಮಕ್ಕೆ ತೊಂದರೆ ನೀಡುತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿ ಕೇಸ್ ಹಾಕುತಾರೆ ಹೀಗಾದರೆ ನಾವು ಯಾರ ಬಳಿ ಹೋಗಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು ಬೀದರ ನಗರದ ನಾಗರೀಕರು.

ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ

Latest News

ಕವನ : ನೆಲದ ನಾಲಿಗೆ ಮೇಲೆ

ನೆಲದ ನಾಲಿಗೆ ಮೇಲೆ​ಆ ಗುಡಿಸಲೊಳಗೆ ಬರೀ ಬಿಕ್ಕಳಿಕೆಗಳೆ ಸುಕ್ಕುಗಟ್ಟಿವೆ, ನೆತ್ತರು ಮೆತ್ತಿದ ಪ್ರಶ್ನೆಗಳು- ಇನ್ನೂ ಉಸಿರಿಡಿದಿವೆ. ​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ ತೊಟ್ಟಿಕ್ಕುತ್ತಿವೆ; ಹಾಲಾಹಲದ ನಂಜುಂಡು, ಬಡಿವಾರದಲಿ ಗರ ಬಡಿದಂತೆ ಹಾಸಿದೆ ಬೆಳಕು. ​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು, ಬಾಳು...

More Articles Like This

error: Content is protected !!
Join WhatsApp Group