ಬೆಂಗಳೂರು– ಡಿ ಕೆ ಶಿವಕುಮಾರ ಒಬ್ಬ ಗಾಂಡು, ನಾನು ಗಂಡಸು. ಆತ ನಿಜವಾಗಿ ಗಂಡಸಾಗಿದ್ದರೆ ರಾಜಕಾರಣದಿಂದ ನಿವೃತ್ತನಾಗಬೇಕು. ಆತ ಮಾಡುತ್ತಿರುವುದು ಹೊಲಸು ರಾಜಕೀಯ ಆತ ರಾಜಕಾರಣಕ್ಕೆ ನಾಲಾಯಕ್ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ನಾನೇನು ಆತನಿಗೆ ಹೆದರುವುದಿಲ್ಲ. ಅಂವಾ ಎಂಥ ಗಂಡಸು ಆತ ಗಾಂಡು. ಎಲ್ಲಾ ಕಾಂಗ್ರೆಸ್ ನಾಯಕರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ಡಿಕೆಶಿಯನ್ನು ರಾಜಕೀಯದಿಂದ ನಿವೃತ್ತಿಗೊಳಿಸಬೇಕು ಎಂದು ಅವರು ಪತ್ರಕರ್ತರಿಗೆ ಹೇಳಿದರು.
ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐ ಟಿ ತಂಡವು ಸಿಡಿ ಲೇಡಿಯ ಪೋಷಕರ ವಿಚಾರಣೆಯಲ್ಲಿ ಪೋಷಕರು ಡಿಕೆ ಶಿವಕುಮಾರ ಅವರ ಹೆಸರನ್ನು ಹೇಳಿದ ಹಿನ್ನೆಲೆಯಲ್ಲಿ ಜಾರಕಿಹೊಳಿ ತೀವ್ರ ಆಕ್ರೋಶದಿಂದ ಪತ್ರಿಕಾಗೋಷ್ಠಿ ನಡೆಸಿದರು.
ಈ ಮುಂಚೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಡಿಲೇಡಿಯ ಪೋಷಕರು, ತಮ್ಮ ಮಗಳನ್ನು ಮುಂದಿಟ್ಡುಕೊಂಡು ರಾಜಕಾರಣ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇರುವುದಾಗಿ ನೇರ ಆರೋಪ ಮಾಡಿದರು.
ತಮ್ಮ ಮಗಳು ಅಂಥವಳಲ್ಲ ಅವಳನ್ನು ತಮ್ಮ ಹೀನ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಲ್ಲದೆ, ನರೇಶ ಗೌಡ ಹೇಳಿದ್ದೆಲ್ಲ ಸುಳ್ಳು ಇದರ ಹಿಂದೆ ಡಿಕೆಶಿ ಇದ್ದಾರೆ ಎಂದರು.
ತದನಂತರ ಪತ್ರಿಕಾಗೋಷ್ಠಿ ನಡೆಸಿದ ರಮೇಶ ಜಾರಕಿಹೊಳಿ, ನಾನು ಪೋಷಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಡಿಕೆಶಿ ವಿರುದ್ಧ ನನ್ನ ಹತ್ತಿರ ೧೧ ಸಾಕ್ಷಿಗಳಿವೆ ಅವನ್ನೆಲ್ಲ ನಾನು ಎಸ್ ಐ ಟಿ ಗೆ ನೀಡುತ್ತಿದ್ದೇನೆ. ನಮ್ಮ ಕುಟುಂಬ ಯಾವ ಹೆಣ್ಣಿಗೂ ಅನ್ಯಾಯ ಮಾಡಿಲ್ಲ.
ಡಿಕೆಶಿ ವಿರುದ್ಧ ದೂರು ಕೊಡುತ್ತೇನೆ ಅಲ್ಲದೆ ಕನಕಪುರ ಕ್ಷೇತ್ರದಲ್ಲಿ ಆತನ ವಿರುದ್ಧ ಸ್ಪರ್ಧೆ ಕೂಡ ಮಾಡುತ್ತೇವೆ ಎಂದು ಜಾರಕಿಹೊಳಿ ಹೇಳಿದರು.