spot_img
spot_img

ಬಸವ ಭಕ್ತರಲ್ಲಿ ಕಳಕಳಿಯ ಮನವಿ

Must Read

- Advertisement -

ಇತ್ತೀಚಿನ ದಿನಗಳಲ್ಲಿ ಕೆಲ ಕೋಮುವಾದಿ ಸಂಘಟನೆಗಳು ವಚನ ಸಾಹಿತ್ಯದ ಮೇಲೆ
ದಾಳಿ ನಡೆಸಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಹು ದೊಡ್ಡ ಆಂದೋಲನವನ್ನು ಯಾಮಾರಿಸಿ ವಚನ ಚಳವಳಿಯು ವೇದ ಆಗಮ ಶಾಸ್ತ್ರ ಉಪನಿಷದ್ ಪೂರ್ಣಾಗಳನ್ನು ಧಿಕ್ಕರಿಸಿ ಸ್ವಾನುಭಾವದ ನೆಲೆಯಲ್ಲಿ ವಚನಗಳನ್ನು ರಚಿಸಿದ್ದಾರೆ.

ಹಲವಾರು ಒಳ್ಳೆಯ ವಿಚಾರಗಳನ್ನು ಬುದ್ಧ ಮಹಾವೀರ ಬಸವಣ್ಣ ಹೇಳಿದ್ದಾರೆ ಅವುಗಳಲ್ಲಿ ಅನೇಕ ಸಾಮ್ಯತೆಗಳು ಇರುತ್ತವೆ ಹಾಗೆಂದ ಮಾತ್ರಕ್ಕೆ ಒಬ್ಬರ ವೈಚಾರಿಕ ಪ್ರೇರಣೆ ಇನ್ನೊಬ್ಬರ ಮೇಲೆ ಆಗಿದೆ ಎಂದರ್ಥವಲ್ಲ. ಭಾಷೆ ಬೇರೆ ಸಂಸ್ಕೃತಿ ಬೇರೆ ಎಲ್ಲರೂ ಮಾನವ ಕಾಳಜಿಯನ್ನು ಬಯಸಿದವರು.

ಬಸವ ದರ್ಶನ (ವಚನ ದರ್ಶನ ) ಎಂಬ ಪೂರ್ವ ನಿಯೋಜಿತ ಪೂರ್ವಗ್ರಹ ಪೀಡಿತ ಪುಸ್ತಕದ ಬಿಡುಗಡೆ ಪುಸ್ತಕ ಮಾರಾಟವು ರಾಜ್ಯದ ತುಂಬೆಲ್ಲಾ ನಡೆದಿದೆ. ಸ್ವಾತಂತ್ರ ನಂತರದ ಮತ್ತು ಅದರ ಪೂರ್ವದಲ್ಲಿ ಸಂಘ ಪರಿವಾರವಾಗಲಿ ಆರ್ ಎಸ ಎಸ ಆಗಲಿ ವಿಶ್ವ ಹಿಂದೂ ಪರಿಷತ್ ಆಗಲಿ ಎಂದೂ ಬಸವಣ್ಣ ಮತ್ತು ಶರಣರ ಬಗ್ಗೆ ಮಾತೆತ್ತಿದವರಲ್ಲ. ಈಗ ಒಮ್ಮಿಲೇ ಬಸವಣ್ಣನವರ ಮೇಲೆ ಏಕೆ ಪ್ರೀತಿ ಗೌರವ ಭಕ್ತಿ ಬಂದಿದೆ ಗೊತ್ತಿಲ್ಲ. ಶ್ರೀ ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಅಯೋಧ್ಯಾ ಪ್ರಕಾಶನದ ಸಂಘ ಪರಿವಾರದ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಆರ್ ಆರ್ ಎಸ ಸಿದ್ಧಾಂತದ ಕೆಲ ಲೇಖಕರನ್ನು ಬಳಸಿಕೊಂಡು ವಚನ ದರ್ಶನ ಪ್ರಕಟಿಸಿ ಮಾರಾಟ ಮಾಡುತ್ತಿದ್ದಾರೆ.

- Advertisement -

ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿ ಸನಾತನಕ್ಕೆ ಸವಾಲೆಸೆಯುವ ರೀತಿಯಲ್ಲಿ ಶರಣರು ಪ್ರತಿ ಕ್ರಾಂತಿ ಮಾಡಿದರು . 44 ವಚನಕಾರರಲ್ಲಿ ಸುಮಾರು 480 ಕ್ಕೂ ಅಧಿಕ ವಚನಗಳಲ್ಲಿ ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿದ ವಚನಗಳನ್ನು ಮರೆ ಮಾಚಿ ಕೆಲ ಪ್ರಕ್ಷಿಪ್ತ ಖೋಟಾ ವಚನಗಳನ್ನು ಹೆಕ್ಕಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಕಪೋಲ ಕಲ್ಪಿತ ವಿಚಾರಗಳಿಂದ ಶರಣರ ವಚನಗಳು ವೇದ ಆಗಮ ಶಾಸ್ತ್ರ ಪುರಾಣ ಆಧಾರಿತವಾಗಿವೆ ಎಂದು ಹಸಿ ಸುಳ್ಳು ಹೇಳುವದನ್ನು ಬಿಟ್ಟರೆ ಕೃತಿಯಲ್ಲಿ ಏನೂ ಇಲ್ಲ.

ವಚನ ಸಾಹಿತ್ಯವನ್ನು ಪಾಶ್ಚಿಮಾತ್ಯ ಸಾಹಿತ್ಯ ಸಿದ್ಧಾಂತಕ್ಕೆ ಹೋಲಿಸಬಾರದು ಅದರಲ್ಲೂ ಕಮ್ಯುನಿಸ್ಟ್ ಸಮಾಜವಾದಿ ಸಿದ್ಧಾಂತಗಳಿಗೆ ಹೋಲಿಕೆ ಮಾಡಬಾರದೆಂಬ ರಾಜಾರಾಮ ಹೆಗಡೆ ಅವರು ಬಸವಣ್ಣನವರು ವಿಶ್ವ ಮಾನ್ಯವಾಗ ಬೇಕೆಂಬುದು ಕೃತಿಯ ಉದ್ದೇಶವೆಂದಿದ್ದಾರೆ. ಎಂತಹ ವೈರುಧ್ಯ ಅವರ ಬರವಣಿಗೆಯಲ್ಲಿ !

ಶೂನ್ಯನಾಥನೆಂಬ ಒಬ್ಬ ನಕಲಿ ವಚನಕಾರರನ್ನು ಸೃಷ್ಟಿಸಿದ್ದಾರೆ. ಡಾ ಫ ಗು ಹಳಕಟ್ಟಿ ಅವರನ್ನು ಕ್ರೈಸ್ತ ಮಠದ ವಿರೋಧಿ ಎಂದು ಬಿಂಬಿಸಿದ್ದಾರೆ. ಹದಿನಾರನೆಯ ಶತಮಾನದಲ್ಲಿ ಉದ್ಭವಗೊಂಡ ಕೃತ್ರಿಮ ಖೋಟಾ ವಚನಗಳನ್ನೇ ಆಧಾರವಾಗಿಟ್ಟುಕೊಂಡು ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟದ ಧಿಕ್ಕು ತಪ್ಪಿಸುವ ಹುನ್ನಾರದಿಂದ ಇಂತಹ ಕೃತ್ಯಗಳು ನಡೆದಿವೆ.

- Advertisement -

ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಅಕ್ಕನ ಅರಿವು ಧಾರವಾಡದ ಸ್ಥಳೀಯ ಬಸವ ಪರ ಸಂಘಟನೆಗಳ ಜೊತೆಗೂಡಿ ಅಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ವಚನ ದರ್ಶನ ಪುಸ್ತಕ ಮುಟ್ಟುಗೋಲಿಗೆ ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.

ಈ ಮಧ್ಯೆ ಸೆಪ್ಟೆಂಬರ್ 5 ರಂದು ವಿಜಯಪುರದಲ್ಲಿ ಈ ವಿವಾದಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಆರ್ ಎಸ ಎಸ ಪ್ರಮುಖ ಬಿ ಆರ್ ಶಂಕಾರಾನಂದ ಅವರು ಮಾತನಾಡುತ್ತ ವಚನಗಳು ಬರೆದಿದ್ದಲ್ಲ ,ಸೃಜಿಸಿದ್ದು ,ಬಸವಾದಿ ಶರಣರು ಅಸಮಾನತೆಯ ವಿರುದ್ಧ ಹೋರಾಟ ಚಳವಳಿಯನ್ನು ನಡೆಸಿಲ್ಲ. ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿ ಅಲ್ಲ. ಭಾರತದಲ್ಲಿ ಕ್ರಾಂತಿ,ಚಳವಳಿಗೆ ಜಾಗವೇ ಇಲ್ಲ ಎಂದು ಅತ್ಯಂತ ಕೀಳುಮಟ್ಟದ ತಮ್ಮ ಜ್ಞಾನವನ್ನು ಪ್ರದರ್ಶಿಸಿದರೂ ಸಹಿತ ಲಿಂಗಾಯತ ಶ್ರೀಮಂತ ಮಠಗಳು ಬಸವ ಪರ ಸಂಘಟನೆಗಳು ಮಹಾಸಭೆಗಳು ಬಸವ ಸಮಿತಿ ಏಕೆ ಮೌನ ತಾಳಿವೆ ಅರ್ಥವಾಗದು. ಈಗ ಮೌನವಾದರೆ ಇಂತಹ ಕೃತಿಗಳ ಸರಮಾಲೆಗಳೇ ಪ್ರಕಟ ಗೊಳ್ಳಬಹುದು .

ಪ್ರತಿಯೊಬ್ಬ ಬಸವಾಭಿಮಾನಿ ಭಾರತೀಯ ಕನ್ನಡಿಗ ಇಂತಹ ಕೃತಿಗಳ ವಿರುದ್ಧ ಸಿಡಿದೇಳಬೇಕು. ಬುದ್ಧ ಬಸವ ಅಂಬೇಡ್ಕರ ಪುಲೆ ಬಾಪು ಮುಂತಾದವರ ಸಮಾಜವಾದದ ಕನಸನ್ನು ಸಮಾಧಿ ಮಾಡಲು ಹೋರಾಟ ಸನಾತನಿಗಳ ಕುತಂತ್ರಕ್ಕೆ ಉದಾಸೀನವ ಮಾಡದೆ ಹೋರಾಟಕ್ಕೆ ಸಜ್ಜಾಗಿ ಮುಂದಿನ ದಿನಗಳಲ್ಲಿ ವಿಜಯಪುರ ಮತ್ತು ಬೇರೆ ಬೇರೆ
ಜಿಲ್ಲೆಗಳಲ್ಲಿ ದೊಡ್ಡ ಪ್ರಮಾದಲ್ಲಿ ಪ್ರತಿಭಟನೆ ನಡೆಯಲಿವೆ.

( ಚರ್ಚಾಪೂರ್ಣ ಅಭಿಪ್ರಾಯಗಳಿಗೆ ಸ್ವಾಗತ. ವಾಟ್ಸಪ್ ಮಾಡಿ ; 9448863309)

ಡಾ ಶಶಿಕಾಂತ ಪಟ್ಟಣ ‘ಅಧ್ಯಕ್ಷರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಬೆಳಗಾವಿ

- Advertisement -

1 COMMENT

  1. ವಿಜಯಪೂರದಲ್ಲಿ ಪ್ರತಿಭಟನೆಯ ಮೊದಲ ಭಾಗವಾಗಿ ಪತ್ರಿಕಾ ಸಮ್ಮೇಳನ ಮಾಡಲಾಯಿತು…. ಎಲ್ಲ ಮಾಧ್ರಮದವರ ಒಳ್ಳೆಯ ಪ್ರ್ತತಿಕ್ರೀಯೆ ಬಂತು….

LEAVE A REPLY

Please enter your comment!
Please enter your name here

- Advertisement -

Latest News

ನನ್ನ ಸಂವಿಧಾನ-ನನ್ನ ಹೆಮ್ಮೆ ಪುಸ್ತಕ ಬಿಡುಗಡೆ ಸಮಾರಂಭ 

     ಮೂಡಲಗಿ -  ಅಂತಾರಾಷ್ಟ್ರೀಯ  ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಇಷ್ಟಾ ಅಪಾರ್ಟ್ ಮೆಂಟ್ನಲ್ಲಿ ಮೂಡಲಗಿಯ ಜ್ಞಾನದೀಪ್ತಿ  ಫೌಂಡೇಶನ್ ಇವರ ವತಿಯಿಂದ ನಡೆದ ಸಮಾರಂಭದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group