ಗಂಗಾಧರ ದೊಡ್ಡವಾಡರಿಗೆ ಹುಬ್ಬಳ್ಳಿಅಕ್ಕನ ಬಳಗದಿಂದ ಆತ್ಮೀಯ ಸನ್ಮಾನ

Must Read

ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಮಾರ್ಗದರ್ಶಕ ಮಂಡಳಿ ಸದಸ್ಯರಾಗಿ ನೂತನವಾಗಿ ನೇಮಕವಾದ ಕನ್ನಡಪರ ಹೋರಾಟಗಾರ ಕರ್ನಾಟಕ ನೆಲ ಜಲ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಉಣಕಲ್ ಗಂಗಾಧರ ದೊಡ್ಡವಾಡ ರವರನ್ನು ಹುಬ್ಬಳ್ಳಿಯ ಜಯ ಚಾಮರಾಜ ನಗರದಲ್ಲಿರುವ ಅಕ್ಕನ ಬಳಗದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಾಧರ ದೊಡ್ಡವಾಡರು 12ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ವಾದ ಮಂಡಿಸಿ ಜಯಸಾಧಿಸಿದ ಅಕ್ಕಮಹಾದೇವಿಯ ಪುತ್ಥಳಿಯನ್ನು ಹುಬ್ಬಳ್ಳಿ ಮಹಾನಗರದಲ್ಲಿ ಸ್ಥಾಪಿಸುವದು ಅವಶ್ಯವಾಗಿದೆ ಈ ಕುರಿತಂತೆ ನಾನು ಪಾಲಿಕೆ ಮೇಲೆ ಒತ್ತಾಯ ತರುತ್ತೇನೆ ಎಂದು ಹೇಳಿದರು.

ಕಪ್ಪತ್ತಗುಡ್ಡದ ನಂದಿವೇರಿ ಮಠದ ಶ್ರೀ ಮ ನಿ ಪ್ರ ಶಿವಕುಮಾರ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ರಾಜಸ್ಥಾನ್ ಜೈನ್ ಯುಥ್ ಫೆಡರೇಷನ್ ನ ಮಹೇಂದ್ರ ಸಿಂಘಿ, ಮಜೇಥಿಯಾ ಫೌಂಡೇಶನ್ ನ ಶ್ರೀಮತಿ ನಂದಿನಿ ಕಶ್ಯಪ್, ಮಾಜಿ ಅಧ್ಯಕ್ಷೆ ಶಾಂತಾ ಹೊಸಕೋಟೆ, ನೂತನ ಅಧ್ಯಕ್ಷೆ ಶಶಿಕಲಾ ಶೀರಿ, ಶ್ರೀಮತಿಯರಾದ ಗೀತಾ ಮುಳ್ಳಳ್ಳಿ, ಜಯಶ್ರೀ ಯಳಮಲಿ, ಮಂಗಳ ಕುಪ್ಪಸ್ತ, ಸುಲೋಚನಾ ಭೂಸನೂರ, ನಿರ್ಮಲಾ ಅಂಗಡಿ, ತಾರಾದೇವಿ ವಾಲಿ,ಇಂದುಮತಿ ಮಾನ್ವಿ, ನಾಗರತ್ನ ಬೆನ್ನೂರು, ವಿಮಲಕ್ಕಾ ಯಳಮಲಿ, ನಾಗರತ್ನ ಬೆನ್ನೂರುಮಠ ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group