- Advertisement -
ಮೂಡಲಗಿ: ಭಾರತ ಸರಕಾರದ ಕೇಂದ್ರಿಯ ರೇಷ್ಮೇ ಮಂಡಳಿಯ ಅಮೃತ ಮಹೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಮೂಡಲಗಿಯ ಅಂತರ್‌ರಾಷ್ಟ್ರೀಯ ರೇಷ್ಮೆ ವಿಜ್ಞಾನಿ ಡಾ. ಟಿ. ಎನ್. ಸೋನವಾಲಕರ ಅವರು ಭಾಜನರಾಗಿದ್ದಾರೆ ಎಂದು ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ ಅವರು ತಿಳಿಸಿದ್ದಾರೆ.
ಇದೇ ಸೆ. ೨೧ರಂದು ಬೆಂಗಳೂರಿನ ಜಿಕೆವಿಕೆ ಅಂತರ್ ರಾಷ್ಟೀಯ ಸಭಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಕೇಂದ್ರ ಜವಳಿ ಸಚಿವ ಗುರುರಾಜ ಸಿಂಗ್ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಟಿ.ಎನ್. ಸೋನವಾಲಕರ ಅವರು ರೇಷ್ಮೆ ತಂತ್ರಜ್ಞಾನದಲ್ಲಿ ಮಾಡಿರುವ ಸಂಶೋಧನೆಗೆ ರಾಷ್ಟ್ರ ಮತ್ತು ಅಂತರ್ ರಾಷ್ಟೀಯ ಅನೇಕ ಪ್ರಶಸ್ತಿ, ಗೌರವಗಳನ್ನು ಈ ಹಿಂದೆ ಪಡೆದುಕೊಂಡಿರುವರು. ಅವರ ಸಾಧನೆ, ಸಂಶೋಧನೆಗೆ ೧೯೯೬ರಲ್ಲಿ ಅಂತರ್‌ರಾಷ್ಟಿಯ ಲೂಯಿಪಾಶ್ಚರ್ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಅವರ ಹೆಗ್ಗಳಿಕೆಯಾಗಿದೆ.