ಬೆಂಗಳೂರು – ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಈ ಬಾರಿಯೂ ಹೆಣ್ಣು ಮಕ್ಕಳು ಟಾಪರ್ ಆಗಿದ್ದು ಶೇ.೭೬ ರಷ್ಟು ವಿದ್ಯಾರ್ಥಿನಿಯರು ಪಾಸಾಗಿದ್ದರೆ ಶೇ. ೫೪ ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ಉಡುಪಿ ಎರಡನೇ ಸ್ಥಾನದಲ್ಲಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಗಳು ಕ್ರಮವಾಗಿ ೨೫, ೨೬ ನೇ ಸ್ಥಾನ ಪಡೆದುಕೊಂವೆ ಕಲಬುರ್ಗಿ ಕೊನೆಯ ಸ್ಥಾನದಲ್ಲಿದೆ.
ನೂರಕ್ಕೆ ನೂರು ಶೇಕಡಾ ಅಂದರೆ ೬೨೫ ಅಂಕಗಳನ್ನು ಪಡೆದುಕೊಂಡು ಬೆಂಗಳೂರಿನ ಜಾಹ್ನವಿ ಇಡಿ ರಾಜ್ಯಕ್ಕೆ ಟಾಪರ್ ಆಗಿದ್ರೆ ಅವರ ಜೊತೆಯಲ್ಲಿಯೇ ೨೨ ವಿದ್ಯಾರ್ಥಿ ವಿದ್ಯಾರ್ಥಿನಿಯರು ೬೨೫ ಅಂಕ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ
ಜಾಹ್ನವಿ, ಧನಲಕ್ಷ್ಮಿ, ಅಖಿಲ್ ಅಹ್ಮದ, ಸಿ.ಭಾವನಾ, ಧನುಷ್ , ಮಧುಸೂದನ ರಾಜ್, ನಮಿತಾ, ರಂಜಿತಾ ಎಸಿ, ನಿತ್ಯಾ ಎಂ ಕುಲಕರ್ಣಿ, ದೃತಿ, ನಮನ, ನಂದನ ಎಚ್ ಓ, ರೂಪಾ ಪಾಟೀಲ, ಮೌಲ್ಯ ಡಿ ರಾಜ್, ತಾನ್ಯಾ, ಉತ್ಸವ ಪಟೇಲ್, ಯಶಸ್ವಿತಾ ರೆಡ್ಡಿ, ಶಫುಗ್ತಾ ಅಂಜುಮ್, ಶಹಿಷ್ಣು, ಸ್ವಸ್ತಿ ಕಾಮತ್, ಯುಕ್ತಾ ಎಸ್ ಈ ಎಲ್ಲರೂ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ.