spot_img
spot_img

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮಾ.೪, ೫ ರಂದು ಬಿಸಿಯೂಟ ನೌಕರರಿಂದ ಹೋರಾಟ

Must Read

spot_img
- Advertisement -

ಸಿಂದಗಿ; ರಾಜ್ಯ ಬಜೆಟ್‌ನಲ್ಲಿ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಮಾರ್ಚ ೪ ಮತ್ತು ೫. ರಂದು ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಅವರಿಗೆ ಬಿಸಿಯೂಟ ನೌಕರರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಬಿಸ್ಮಿಲ್ಲಾ ಎ. ಇನಾಮದಾರ ಮಾತನಾಡಿ, ರಾಜ್ಯ ಸರ್ಕಾರವು ಮಾರ್ಚನಲ್ಲಿ ಬಜೆಟ್ ಮಂಡಿಸಲಿದೆ. ಹಲವು ವರ್ಷಗಳಿಂದ ವೇತನ ಹೆಚ್ಚಳಕ್ಕಾಗಿ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಬಿಸಿಯೂಟ ನೌಕರರ ಪ್ರಮುಖ ಬೇಡಿಕೆಗಳಾದ ಚುನಾವಣಾ ಸಂದರ್ಭದ ಭರವಸೆಯಂತೆ ವೇತನ ಹೆಚ್ಚಳ, ಎಪ್ರೀಲ್ — ಮೇ ತಿಂಗಳಿನಲ್ಲಿ ಬರಗಾಲ ಘೋಷಿತ ಜಿಲ್ಲೆಗಳಲ್ಲಿ ಕೆಲಸ ಮಾಡಿದ ವೇತನ ಬಿಡುಗಡೆಗಾಗಿ., ಅಡುಗೆ ಕೇಂದ್ರಗಳ ಪುನಶ್ಚೇತನಕ್ಕಾಗಿ ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು, ತಿಂಗಳಿಗೆ ಸರಿಯಾಗಿ ಗೌರವಧನ, ಸಾದಿಲ್ವಾರು ಹಣ, ಮೊಟ್ಟೆ ಹಣಗಳು ಸೂಕ್ತವಾಗಿ ಬಿಡುಗಡೆಗಾಗಿ ಒತ್ತಾಯಿಸಿ ರಾಜ್ಯಾದ್ಯಂತ ಅಕ್ಷರದಾಸೋಹ ನೌಕರರು ತಮ್ಮ ಕೆಲಸ ಸ್ಥಗಿತ ಗೊಳಿಸಿ ಬೆಂಗಳೂರಿನಲ್ಲಿ ಮಾರ್ಚ ೪ ಮತ್ತು ೫ ರಂದು ಹೋರಾಟದಲ್ಲ್ಲಿ ಪಾಲ್ಗೋಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೈನಾಜ ಮುಲ್ಲಾ, ರೇಣುಕಾ ಸುಣಗಾರ, ಜಯಶ್ರೀ ಪಾರತನಳ್ಳಿ ಸುಭದ್ರಾ ತಿಳಗೊಳ, ಸುಮಿತ್ರಾ ತೆಲಗಬಾಳ, ಭೀಮಬಾಯಿ ಸುಲ್ಪಿ, ಶ್ರೀದೇವಿ ಗಾಣಿಗೇರ, ನೀಲಮ್ಮ ಅಡವಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...
- Advertisement -

More Articles Like This

- Advertisement -
close
error: Content is protected !!
Join WhatsApp Group