ಅಕ್ಷರ ದಾಸೋಹ ಬಿಸಿ ಊಟದ ಯೋಜನೆಯ ನೌಕರರ ಬೇಡಿಕೆಗಾಗಿ ಆಗ್ರಹಿಸಿ ಮನವಿ

Must Read

 

ಮೂಡಲಗಿ: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರ ಸಂಘ(ಸಿಐಟಿಯು)ದಿಂದ ಬಿಸಿ ಊಟ ಯೋಜನೆಯ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮೂಡಲಗಿ ತಾಲೂಕಾ ಪಂಚಾಯತ ಅಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನದ ಬಿಸಿ ಊಟ ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಿ ತಡೆಗಟ್ಟಲು, ಅಪೌಷ್ಠಿಕತೆ ತಡೆಗಟ್ಟಲು, ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ 1 ಲಕ್ಷ 17 ಸಾವಿರ ಮಹಿಳೆಯರು 58 ಲಕ್ಷ 39 ಸಾವಿರ ಬಡ, ರೈತ, ಕೃಷಿ ಕೂಲಿಕಾರರ, ದೀನ ದಲಿತ ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ ಹಾಲು ನೀಡಿ ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಮಹಿಳೆಯ ತಾಯ್ತನದ ಪರಿಶ್ರಮವಿದೆ, ದಿನಕ್ಕೆ ಸುಮಾರು 6 ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವ ಪರಿಶ್ರಮ ಗುರುತಿಸಿ ಕನಿಷ್ಠ ಕೂಲಿ 21 ಸಾವಿರ ನೀಡಬೇಕಿದೆ, ಬಿಸಿ ಊಟ ನೌಕರರನ್ನು ಶಿಕ್ಷಣ ಇಲಾಖೆಯ ಜವಾಬ್ದಾರಿಗೆ ಸಂಪೂರ್ಣವಾಗಿ ತಂದು ಸ್ಪಂದಿಸಬೇಕು.

2023ರ ಬಜೆಟ್ ದಲ್ಲಿ ಒಂದು ಸಾವಿರ ಗೌರವ ಧನವನ್ನು ಬಿಡುಗಡೆ ಮಾಡಬೇಕು, ಬೆಲೆ ಏರಿಕೆ ಆಧಾರದಲ್ಲಿ 12 ಸಾವಿರ ವೇತನ  ನೀಡ ಬೇಕು,  ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ನೌಕರಿಗೆ 1ಲಕ್ಷ ಪರಿಹಾರ ನೀಡಲು ಆದೇಶಿಸಬೇಕು, ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಮುಖ್ಯ ಅಡುಗೆಯವರಿಗೆ ನೀಡಬೇಕು, ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು, ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡಬೇಕು, ಮಾರ್ಚ 31ಕ್ಕೆ  ಬಿಡುಗಡೆ ಮಾಡುವ ಸುತ್ತೋಲೆಯಲ್ಲಿ ಬದಲಾವಣೆ ಮಾಡಬೇಕು,  ಬಿಸಿ ಊಟ ಯೋಜನೆಯ ಯಾವುದೇ ಸ್ವರೂಪದ ಜವಾಬ್ದಾರಿಯನ್ನು ಖಾಸಗಿಸಂಘ-ಸಂಸ್ಥೆಗಳಿಗೆ ನೀಡದೇ ಸರ್ಕಾರದ ದಿನದಲ್ಲಿಯೇ ನಿರ್ವಹಿಸಬೇಕು, ಈಗಾಗಲೇ ಸಂಘಗಳಿಗೆ ನೀಡಿದ ಶಾಲೆಗಳ ಬಿಸಿ ಊಟ ವಾಪಸ್ಸು ಪಡೆದು ಸರ್ಕಾರವೇ ಊಟ ನೀಡುವಂತಾಗಬೇಕು,  ಪ್ರತಿ ಶಾಲೆಯಲ್ಲಿ ಕನಿಷ್ಠ ಎರಡು ಜನ ಅಡುಗೆಯವರನ್ನು ನೇಮಿಸಬೇಕು ಹಾಗೂ ಈಗಾಗಲೇ ಶಾಲೆಯಲ್ಲಿ ಅಡುಗೆ ಕೆಲಸದ ಜೊತೆ ಶಾಲಾ ಸ್ವಚ್ಚತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು, ಇನ್ನಿತರ ಕೆಲಸ ಚಾಚೂ ತಪ್ಪದೇ ಮಾಡುತ್ತಿರುವದರಿಂದ ಬಿಸಿ ಊಟ ನೌಕರರನ್ನು “ಡಿ” ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರ ಸಂಘದ ತಾಲೂಕ ಅಧ್ಯಕ್ಷೆ ಮಾಸಾಬಿ ದಲಾಯಿತ, ಕಾರ್ಯದರ್ಶಿ ಪಾರ್ವತಿ  ಕೌಜಲಗಿ, ಖಜಾಂಚಿ ಶಶಿಕಲಾ ಕೊಕಟನೂರ ಹಾಗೂ ತಾಲೂಕಿನ ಅಕ್ಷರ ದಾಸೋಹ ಬಿಸಿ ಊಟ ಯೋಜನೆ ಸಿಬ್ಬಂದಿ ವರ್ಗದವರು ಇದ್ದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group