ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ಸಂಸ್ಕಾರವೂ ಮುಖ್ಯ: ಗಿರೆಣ್ಣವರ

Must Read

ಮೂಡಲಗಿ: ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಅಭ್ಯಾಸದ ಜೊತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಅಕ್ಷರದೊಂದಿಗೆ ಉತ್ತಮ ಸಂಸ್ಕಾರವೂ ದೊರೆಯಬೇಕೆಂದು ಮುಖ್ಯಾಧ್ಯಾಪಕ ಎ.ವ್ಹಿ. ಗಿರೆಣ್ಣವರ ಹೇಳಿದರು.

ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ತಾಯಂದಿರ ಸಭೆ ಹಾಗೂ ತಾಯಂದಿರ ಪಾದ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಗೊಳಿಸದೆ ಶೃದ್ಧೆಯಿಂದ ಪಾಠ ಪ್ರವಚನದೊಂದಿಗೆ ಗುರು ಹಿರಿಯರಿಗೆ ಗೌರವ ಭಕ್ತಿಯಿಂದ ನಡೆದುಕೊಂಡಲ್ಲಿ ಅವರ ಅಶೀರ್ವಾದ ಸದಾ ವಿದ್ಯಾರ್ಥಿಗಳನ್ನು ಕಾಪಾಡುತ್ತದೆ ಎಂದರು. 

ಪಾಲಕರು ಕೂಡ ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ಕೊಡಿಸುವದು ಪಾಲಕರ ಆದ್ಯ ಕರ್ತವ್ಯವಾಗಿದೆ ಮಕ್ಕಳ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು ಎಂದು ಹೇಳಿದರು.

ಶಿಕ್ಷಕ ಮಹಾದೇವ ಗೋಮಾಡಿ ಮಾತನಾಡಿ,  ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಪಾಲಕರ ಪಾತ್ರ ಕೂಡಾ ತುಂಬಾ ಮುಖ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವಲ್ಲಿ ತಂದೆ ತಾಯಿಗಳು ನೆರವಾಗಬೇಕೆಂದರು. ಕೌಟುಂಬಿಕ ಕೆಲಸಗಳೊಂದಿಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು. 

ಕಾರ್ಯಕ್ರಮದಲ್ಲಿ ಏಳು ಹಾಗೂ ಎಂಟನೆಯ ತರಗತಿಯ ವಿದ್ಯಾರ್ಥಿಗಳು ಅವರ ತಂದೆ ತಾಯಿಗಳ ಪಾದ ಪೂಜೆ ನೆರವೇರಿಸಿ ಅಶಿರ್ವಾದ ಪಡೆದರು. 

ಈ ಸಂದರ್ಭದಲ್ಲಿ ಪಾಲಕರು ಭಾವುಕರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಪ್ರತಿಜ್ಞೆ ಮಾಡಿದರು. ಮಾಧ್ಯಮಿಕ ಶಿಕ್ಷಣವನ್ನು ಕೂಡ ಇದೇ ಶಾಲೆಯಲ್ಲಿ ಆರಂಭಿಸಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ನೂರಾರು ತಾಯಂದಿರು ಪಾಲ್ಗೊಂಡಿದ್ದರು. 

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಯಲ್ಲವ್ವ ಬಿಳಿಗೌಡ್ರ, ಶಿಕ್ಷಕರಾದ ಕಿರಣ ಭಜಂತ್ರಿ, ಎಸ್.ಡಿ ಲಮಾಣಿ, ವಿಮಲಾಕ್ಷಿ ತೋರಗಲ್, ಕುಸುಮಾ ಚಿಗರಿ, ಶೀಲಾ ಕುಲಕರ್ಣಿ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಅತಿಥಿ ಶಿಕ್ಷಕರಾದ ರೂಪಾ ಗದಾಡಿ, ರೇಖಾ ಗದಾಡಿ, ಜ್ಯೋತಿ ಉಪ್ಪಾರ, ಖಾತೂನ ನದಾಫ, ಶಿವಲೀಲಾ ಹಣಮನ್ನವರ ಹಾಗೂ ಹೊಳೆಪ್ಪಾ ಗದಾಡಿ ಉಪಸ್ಥಿತರಿದ್ದರು.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group