ಅಂಬೇಡ್ಕರ್, ಟಿಪ್ಪು ಭಾವಚಿತ್ರ ವಿರೂಪ ; ದಲಿತ ಸಂಘಟನೆಯಿಂದ ಪ್ರತಿಭಟನೆ

0
313

ಗೋಕಾಕ; ತಾಲೂಕಿನ ದುಪಧಾಳ ಗ್ರಾಮದಲ್ಲಿ ಚೆನ್ನಮ್ಮನಗರ ಎಂದು ಅಳವಡಿಸಲಾದ ನಾಮಪಲಕದಲ್ಲಿರುವ ಡಾ. ಅಂಬೇಡ್ಕರ ಮತ್ತು ಟಿಪ್ಪು ಸುಲ್ತಾನ ಭಾವ ಚಿತ್ರಗಳನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ವಿವಿಧ ದಲಿತಪರ ಸಂಘಟನೆಗಳು ಹಾಗೂ ಜೈ ಕರ್ನಾಟಕ ಸಂಘದ ನೇತೃತ್ವದಲ್ಲಿ ಘಟಪ್ರಭಾ- ದುಪಧಾಳ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಇಂಥ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ದಲಿತ ಮುಖಂಡ ಸಂತೋಷ ದೊಡಮನಿ ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಹತ್ತಿರ ಬಾಬಾಸಾಹೇಬರ ಲೇಖನಿ ಇದೆ, ಟಿಪ್ಪು ಸುಲ್ತಾನರ ಖಡ್ಗವೂ ಇದೆ.ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ನಮ್ಮದು ಸೌಹಾರ್ದಯುತ ಗ್ರಾಮ ಇಲ್ಲಿನ ಸೌಹಾರ್ದ ಕೆಡಿಸಲು ಇಂಥ ಕೃತ್ಯ ನಡೆಸಿದ್ದಾರೆ. ಇದೆ ರೀತಿ ಮುಂದುವರೆದರೆ ಇಲ್ಲಿ ಇನ್ನೊಂದು ಭೀಮಾ ಕೊರೆಗಾಂವ ಆಗುತ್ತದೆ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕಿಡಿಗೇಡಿಗಳನ್ನು ಬಂಧಿಸಲು ಪೋಲಿಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಪ್ರತಿಭಟನೆಯಲ್ಲಿ ಸುನೀಲ ಈರಗಾರ, ಸಲೀಮ ಮುಲ್ಲಾ ಹಾಗೂ ಇನ್ನುಳಿದ ದಲಿತಪರ ಸಂಘಟನೆಗಳ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.