spot_img
spot_img

ಹುಟ್ಟು ಹಬ್ಬ ಆಚರಿಸಿ ಶಕ್ತಿ ಪ್ರದರ್ಶನ ಮಾಡಿದ ಸಿದ್ದು ಪಾಟೀಲ

Must Read

- Advertisement -

ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ಅವರ 44ನೇ ಜನ್ಮದಿನ ಆಚರಣೆ

ಬೀದರ – ಗಡಿ ಜಿಲ್ಲೆ ಬೀದರನ ಹುಮನಬಾದ ತಾಲೂಕು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಣ್ಣ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ. ಈ ಹಿನ್ನೆಲೆಯಲ್ಲಿ ಇಂದು ತಮ್ಮನಾದ ಡಾ. ಸಿದ್ದು ಪಾಟೀಲ ಭರ್ಜರಿಯಾಗಿ ಹುಟ್ಟು ಹಬ್ಬದ ಆಚರಿಸಿಕೊಂಡು ತಮ್ಮ ಜನಪ್ರಿಯತೆಯ ಶಕ್ತಿ ಪ್ರದರ್ಶನ ನಡೆಸಿದರು.

ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ಅವರ ಜನ್ಮದಿನದ 44ನೇ ವರ್ಷಾಚರಣೆ ಕೇಂದ್ರ ಮಂತ್ರಿ ಭಗವಂತ ಖೂಬಾ ಮತ್ತು ಬಿಜೆಪಿ ಹಿರಿಯ ನಾಯಕರ ಸಮುಖದಲ್ಲಿ ಹಾಗು ಗೆಳೆಯರ ಬಳಗದ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಭವ್ಯವಾಗಿ ನಡೆಯಿತು.

- Advertisement -

ಸಿದ್ದು ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಡಾ.ಸಿದ್ದು ಪಾಟೀಲ ತಾಳ್ಮೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ನಾಯಕರು ಸಿದ್ದು ಪಾಟೀಲಗೆ ಸಲಹೆ ನೀಡಿದರು.

- Advertisement -

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ, ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಮೇಲೆ ವಾಗ್ದಾಳಿ ನಡೆಸಿದರು ಎದುರಾಳಿಗಳ ಕೆಟ್ಟ ದೃಷ್ಟಿ ಬೀಳುವುದಕ್ಕೆ ಅವಕಾಶ ಕಲ್ಪಿಸದೇ ಮೌನದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸಿದ್ದು ಪಾಟೀಲ ತಪ್ಪಿದರೆ ತಿದ್ದಿಹೇಳಿ ಸುಧಾರಿಸಿಕೊಳ್ಲುತ್ತೇನೆ ಎಂದರು.

ಹುಟ್ಟು ಹಬ್ಬದ ಸಮಾರಂಭ ಒಂದು ರೀತಿಯಲ್ಲಿ ಶಕ್ತಿ ಪ್ರದರ್ಶನ ಎಂಬಂತಾಗಿದ್ದು ಮುಂಬರುವ ದಿನಗಳಲ್ಲಿ ಹುಮನಾಬಾದ ಕ್ಷೇತ್ರದಲ್ಲಿ ಸಹೋದರರ ಸವಾಲ್ ಯಾವ ರೀತಿ ಇರುವುದು ಎಂಬ ಬಗ್ಗೆ ತೀವ್ರ ಕುತೂಹಲ ಕ್ಷೇತ್ರದ ಜನರಲ್ಲಿ ಇದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಶಿವಯೋಗಿ ಸಿದ್ಧರಾಮರು 12ನೇ ಶತಮಾನದ ಶರಣ ಕ್ರಾಂತಿಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಹೆಸರುಗಳಲ್ಲಿ ಶಿವಯೋಗಿ ಸಿದ್ದರಾಮರ ಹೆಸರು ಅತಿ ಮಹತ್ವದ್ದಾಗಿದೆ. ಕರ್ಮ ಯೋಗದಿಂದ ಶಿವಯೋಗಕ್ಕೆ ಏರಿದ ಸಿದ್ದರಾಮ...
- Advertisement -

More Articles Like This

- Advertisement -
close
error: Content is protected !!
Join WhatsApp Group