ಲೇಖನ : ಮೈಲಾರ ಬಸವಲಿಂಗ ಶರಣರು

Must Read

ಮೈಲಾರ ಬಸವಲಿಂಗ ಶರಣರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಅವರು ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದು, ವ್ಯಾಪಾರ ವೃತ್ತಿಯನ್ನು ಕೈಗೊಂಡಿದ್ದರು. ಅವರು ಗುರುಗಳು ಶ್ರೀ ಚೆನ್ನವೀರಸ್ವಾಮಿಗಳು ಹಾಲವರ್ತಿಯವರು, ಮತ್ತು ತಮ್ಮ ‘ಗುರುಕರುಣ ತ್ರಿವಿಧಿ’ ಕೃತಿಗಾಗಿ ಪ್ರಸಿದ್ಧರಾಗಿದ್ದಾರೆ.

ಹುಟ್ಟು :ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಜನಿಸಿದರು.

ಕುಟುಂಬ ಮತ್ತು ವೃತ್ತಿ: ವ್ಯಾಪಾರಿ ಕುಟುಂಬದವರಾಗಿದ್ದು, ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ಗುರುಗಳು ಹಾಲವರ್ತಿ ಶ್ರೀ ಚೆನ್ನವೀರ ಶ್ರೀಗಳು

ಕೃತಿ: ‘ಗುರುಕರುಣ ತ್ರಿವಿಧಿ’* ಎಂಬ ಕೃತಿಯನ್ನು ರಚಿಸಿದ್ದಾರೆ. ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ, ಗುರು, ಲಿಂಗ, ಜಂಗಮ ದಾಸೋಹಿಗಳಾಗಿ ಶಿವಾನುಭವವನ್ನು ಪ್ರಚಾರಪಡಿಸಿದ್ದಾರೆ.

ಮೈಲಾರದ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ = ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಬಣಜಿಗ ಸಮುದಾಯದವರು. ವ್ಯಾಪಾರ ಇವರ ವೃತ್ತಿ. ಮೈಲಾರದಿಂದ ಸುಮಾರು ೮ ಕಿ.ಲೋ ಮೀಟರ ದೂರದಲ್ಲಿರುವ ಹಾಲವರ್ತಿ ಚನ್ನವೀರಸ್ವಾಮಿಗಳ ಶಿಷ್ಯತ್ವವನ್ನು ಪಡೆದಿದ್ದರು.

*ಇವರ ಕೃತಿಗಳು*

‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍ ‌ಷಟ್ ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ
ಗುರುಕರುಣ ತ್ರಿವಿಧಿ
ಶಿವಾನುಭವ ದರ್ಪಣ
ಲಿಂಗಪೂಜಾ ವಿಧಾನಗಳು
ಭಕ್ತಿ ಬಿನ್ನಹ ದಂಡಕಗಳು
ಐದು ಕೃತಿಗಳ್ಳಲ್ಲಿ ಗುರುಕರುಣ ತ್ರಿವಿಧಿ ಮುಖ್ಯವಾದ ಕೃತಿ. ಗುರು ಚನ್ನವೀರಸ್ವಾವಿಗಳು ಕೋಪದಿಂದ ನೀನು ಬಸಪ್ಪ ಅಲ್ಲ ಮುಸಪ್ಪ ಎಂದು ಬೈದ ಸಂದರ್ಭದಲ್ಲಿ ಒಂದು ಕಾಲಿನಲ್ಲಿ ನಿಂತು ೩೩೩ ತ್ರಿವಿಧಿಗಳನ್ನು ಹೇಳಿದರು. ತ್ರಿವಿಧಿ ಎಂದರೆ ಮೂರು ಸಾಲಿನ ಪದ್ಯ. ಮೊದಲಿನ ಎರಡು ಸಾಲುಗಳು ಮುಖ್ಯ ತತ್ವ ಒಳಗೊಂಡಿರುತ್ತವೆ. ಇದರಲ್ಲಿ ಅ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಷ್ಟಾವರಣ, ಪಂಚಾಚಾರ, ಷಟ ಸ್ಥಲ ತತ್ವಗಳ ವಿಚಾರ ಮುಖ್ಯವಾಗಿದೆ.

*ಶ್ರೀ ಗುರು ಪ್ರಾರ್ಥನೆ*
ಶ್ರೀ ಗುರುವೆ ಸತ್ಕ್ರಿಯೆಯ | ಆಗರವೆ ಸುಜ಼್ಜಾನ

ಸಾಗರವೆ ಎನ್ನ ಮತಿಗೆ ಮಂಗಳವಿತ್ತು

ರಾಗದಿಂ ಬೇಗ ಕೃಪೇಯಾಗು ||೧||

ಸದ್ಗುರುವಿನ ಸ್ವರೂಪ
ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ

ಹರವೆ ನಿಜಭಕ್ತಿ-ಜ಼್ಜಾನವೈರಾಗ್ಯಮಂ

ದಿರವೆ ಮದ್ಗುರುವೆ ಕೃಪೆಯಾಗು ||೨||

ದೇಶಿಕನೆ ಅನುಭವೋ|ಲ್ಲಾಸಕನೆ ಸಂಕಲ್ಪ ನಾಶಕನೆ ‘ಯಾಣ’ ವಾದಿ ತ್ರೈಮಲದೊಳ್ನಿ ರಾಶಕನೆ ಎನಗೆ ಕೃಪೆಯಾಗು ||೩||

ಕಾರ್ಯಕಾರಣ ಭಕ್ತಿ| ತುರ್ಯತಾಮಸದ ಚಿ ತ್ಸೂರ್ಯ ಎಡರಿಂಗೆ-ಧೈರ್ಯವಾಗಿಹ ಗುರು ವರ್ಯ ನೀನೆನಗೆ ಕೃಪೆಯಾಗು ||೪||

___________________________

*ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ*

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group