ಪ್ರಾಚ್ಯ ಪ್ರಜ್ಞೆ’ ಎಂಬ ವಿನೂತನ ಕಾರ್ಯಕ್ರಮ

Must Read

ಸವದತ್ತಿ: “ಗತಕಾಲದ ವೈಭವದ ಕುರುಹುಗಳಾದ ಪ್ರಾಚೀನ ಸ್ಮಾರಕ, ಪರಂಪರೆ ಮೊದಲಾದವುಗಳ ಕುರಿತು ಬೆಳೆಯುವ ಸಿರಿಗಳಾದ ಮಕ್ಕಳಿಗೆ ತಿಳಿಸಿಕೊಡಲು ಪ್ರಾಚ್ಯವಸ್ತು, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯು ‘ಪ್ರಾಚ್ಯ ಪ್ರಜ್ಞೆ’ ಎಂಬ ವಿನೂತನ ಕಾರ್ಯಕ್ರಮ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ.” ಎಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ  ದಂಡಿನ ತಿಳಿಸಿದರು.

ಅವರು ಪಟ್ಟಣದ ಗುರ್ಲಹೊಸೂರಿನ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಪ್ರಾಚ್ಯ ಪ್ರಜ್ಞೆ ಕಾರ್ಯ ಕ್ರಮವನ್ನು ಕುರಿತು ಮಾತನಾಡಿದರು. 

“ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಾಚೀನ ಸ್ಮಾರಕ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಸ್ಕೃತಿ ಹಾಗೂ ಪರಂಪರೆ ಸಂಪತ್ತಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಿದು. ಮಕ್ಕಳಿಗೆ ನಮ್ಮ ನೆಲದ ‘ಪರಂಪರೆ ಸಂಪತ್ತಿನ’ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ, ಜಿಲ್ಲೆ, ತಾಲೂಕು ಮಟ್ಟ ಹಾಗೂ ಶಾಲೆಗಳ ಹಂತದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು  ತಿಳಿಸಿದರು.

ಈ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಗಳಾದ ಗುರುನಾಥ ಕರಾಳೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಧೀರ್ ವಾಘೇರಿ ಶಿಕ್ಷಕರಾದ ಬಿ ಡಿ ಪಾಟೀಲ ಎಸ್ ಎಸ್ ಹಾವೇರಿ, ಶ್ರೀಮತಿ ಗುಂಡಾರ ಗುರ್ಲಹೊಸೂರಿನ ಸಮೂಹ ಸಂಪನ್ಮೂಲ ವ್ಯಕ್ತಿ ರಾಮಚಂದ್ರಪ್ಪ ಉಪಸ್ಥಿತರಿದ್ದರ.

ಕಾರ್ಯ ಕ್ರಮದ ಪ್ರಾರಂಭದಲ್ಲಿಶಿಕ್ಷಣ ಸಂಯೋಜಕ ಜಿ. ಎಂ. ಕರಾಳೆ ಸ್ವಾಗತಿಸಿದರು. ಶಿಕ್ಷಕ ಪಿ ಎಸ್ ಶಿಂಧೆ ನಿರೂಪಿಸಿದರು ಶಿಕ್ಷಕ ಎಂ. ಡಿ. ದೊಡ್ಡಕಲ್ಲನ್ನವರ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group