ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ, ಹಾಸನ ಇವರು ಶ್ರೀಮತಿ ಸಾವಿತ್ರಿ ಬಿ.ಗೌಡ ಇವರ ಪ್ರಾಯೋಜಕತ್ವದಲ್ಲಿ ಸ್ಥಳ: ವಿದ್ಯುತ್ ನಗರ, ೨ನೇ ಕ್ರಾಸ್, ವರ್ಷ ಪಾರ್ಕ್ ಹತ್ತಿರ, ಆಕಾಶವಾಣಿ ಎದುರು, ಶ್ರೀನಿಧಿ ಗ್ರಾನೈಟ್ ಮತ್ತು ವಿದ್ಯಾನಿಕೇತನ ಕಾಲೇಜು ನಡುವಿನ ಅಡ್ಡ ರಸ್ತೆ, ಸಾಲಗಾಮೆ ರೋಡ್, ಹಾಸನ ಇಲ್ಲಿ ದಿನಾಂಕ ೨-೩-೨೦೨೫ರ ಭಾನುವಾರ ಸಂಜೆ ೩.೦೦ ಗಂಟೆಗೆ ಸರಿಯಾಗಿ ೩೨೭ನೇ ತಿಂಗಳ ಸಾಹಿತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಾಸನದ ಹಿರಿಯ ಲೇಖಕಿ ಶ್ರೀಮತಿ ಸಾವಿತ್ರಿ ಬಿ.ಗೌಡ ಇವರ ಚೊಚ್ಚಲ ಕೃತಿ ಹೃದಯದ ಕವಿತೆ ಕುರಿತ್ತಾಗಿ ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಾರ್ತಿ ಹಾಗೂ ಲೇಖಕಿ, ಹಾಸನ ಇವರು ಮಾತನಾಡುವರು.
ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕರಿಂದ ಭಾವಗೀತೆ, ಜಾನಪದ ಗೀತ ಗಾಯನ, ಕಲಾವಿದರಿಂದ ರಂಗಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖೈಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಸಾಹಿತಿ ಗೊರೂರು ಅನಂತರಾಜು ತಿಳಿಸಿದ್ದಾರೆ.