ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಂಗನವಾಡಿ ಪೂರಕ; ಶಾಸಕ ಭೂಸನೂರ

Must Read

ಸಿಂದಗಿ: ಜನಸಾಮಾನ್ಯರಿಗೆ ಖಾಸಗಿ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಯಂತಹ ಶಿಕ್ಷಣ ಸಿಗುತ್ತದೆ ಆದರೆ ಬಡಕುಟುಂಬದ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಂಗನವಾಡಿ ಕೇಂದ್ರಗಳೇ ಎಲ್‍ಕೆಜಿ ಯುಕೆಜಿಗಳೂ ಇಂತವುಗಳು ಪೂರಕ ವಾತಾವರಣ ನಿರ್ಮಿಸುತ್ತವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮಕ್ಕಳ ಬಾಲ್ಯಹಂತದ ಕಲಿಕೆಗೆ ಅಂಗನವಾಡಿ ಕೇಂದ್ರಗಳು ಆಸರೆಯಾಗಿವೆ ಅಲ್ಲಿ ಸಿಗುವ ಬಾಲ್ಯ ಶಿಕ್ಷಣದಿಂದ ಮಗು ಜೀವನದಲ್ಲಿ ಶಿಸ್ತು ಮತ್ತು ಸಂಸ್ಕಾರ ಕಲಿಯಲು ಸಾಧ್ಯವಾಗುತ್ತದೆ ಎಂದರು.

ಜಿಪಂ ಮಾಜಿಸದಸ್ಯ ಕಾಶಿನಾಥ ಗಂಗನಳ್ಳಿ, ಹಿರಿಯರಾದ ಕೇಶವ ಜೋಶಿ, ತಾಪಂ ಮಾಜಿಸದಸ್ಯ ಶಂಕರಲಿಂಗ ಕಡ್ಲೇವಾಡ, ಪ್ರಥಮದರ್ಜೆ ಗುತ್ತಿಗೆದಾರ ವಿರುಪಾಕ್ಷಿ ಗಂಗನಳ್ಳಿ, ಸಿದ್ದಾರಾಮ ಹಂಗರಗಿ, ಗ್ರಾಪಂ ಸದಸ್ಯ ನಿಂಗಪ್ಪ ಅಳ್ಳಗಿ, ಗನಿಸಾಬ ನಾಗಾವಿ, ಗಾಲೀಬಸಾಬ ನಾಗಾವಿ, ರಮೇಶಗೌಡ ಬಿರಾದಾರ(ಹವಳಗಿ), ನಾಗೇಶ ಗಂಗನಳ್ಳಿ, ಅನೀಲ ರಜಪುತ, ಸಿದ್ದಾರಾಮ ಹೋರ್ತಿ, ಶಿವಾನಂದ ನಾಗಾವಿ, ಶಾಂತಪ್ಪ ನಾವಿ, ವಿರುಪಾಕ್ಷಿ ಯಂಕಂಚಿ, ಗನಿಸಾಬ ಚೌಧರಿ, ವಿಶ್ವನಾಥ ಹಾಳಕಿ, ಮುದುಕ ಹೀರಾಪೂರ, ಗದುಗೆಪ್ಪ ಗಂಗನಳ್ಳಿ, ಅಂಬಾದಾಸ ಮೀನಗಾರ, ಕಲ್ಲಪ್ಪ ಸೊಡ್ಡಿ, ನೀಲೇಶ ಗಂಗನಳ್ಳಿ, ಸಿದ್ರಾಮ ಗಬಸಾವಳಗಿ, ಶರಣಪ್ಪ ಗಂಗನಳ್ಳಿ ಇದ್ದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group