ಮುಖ್ಯಮಂತ್ರಿ ಯವರಿಗೆ ಶಿಕ್ಷಕರ ವಿವಿಧ ಬೇಡಿಕೆ ಗಳ ಕುರಿತು ಮನವಿ

0
486

ಸವದತ್ತಿ; ಬುಧವಾರ ಸವದತ್ತಿ ಶ್ರೀ ಯಲ್ಲಮ್ಮಾ ಸುಕ್ಷೇತ್ರ ಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆನಂದ. ಚಂದ್ರಶೇಖರ ಮಾಮನಿ ಉಪಸಭಾಧ್ಯಕ್ಷರು ಕರ್ನಾಟಕ ವಿಧಾನಸಭೆ ಬೆಂಗಳೂರು ಇವರ ಮನೆಗೆ ಆಗಮಿಸಿದಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಯಿತು. ಮತ್ತು ಗುರುಭವನ ಕಟ್ಟಡದ ಕಾಮಗಾರಿಗೆ ಅನುದಾನ ಮಂಜೂರ ಮಾಡಲು ಮನವಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹೆಚ್.ಆರ್. ಪೆಟ್ಲೂರ ನೇತೃತ್ವದಲ್ಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಫ್.ಜಿ. ನವಲಗುಂದ, ಎಸ್ ವ್ಹಿ ಜೋಶಿ ಪ್ರ.ಗು ಎಮ್.ಜಿ ಕಡೇಮನಿ ಇ ಸಿ ಓ,.ಸಿ.ವ್ಹಿ ಬಾರ್ಕಿ ಬಿ.ಐ.ಇ.ಆರ್.ಟಿ, ಎ ಎ ಧರೇಕಾರ ಶಿಕ್ಷಕರು, ಬಿ ಟಿ ಜಗಲಿ ಶಿಕ್ಷಕರು ಆರ್ ಬಿ ಪೂಜೇರ ಶಿಕ್ಷಕರು, ಎಮ್.ಪಿ. ಪಾಟೀಲ ಶಿಕ್ಷಕರು ಹಾಜರಿದ್ದು ಸಿನಿಮಾ ಆಂಡ್ ಆರ್ ನಿಯಮಾವಳಿ ತಿದ್ದುಪಡಿ. ಪದವೀಧರ ಶಿಕ್ಷಕರ ಸಮಸ್ಯೆ.. ಮುಖ್ಯ ಶಿಕ್ಷಕರ 15.20.25 ವರ್ಷಗಳ ವೇತನ ಬಡ್ತಿ. ದೈಹಿಕ ಶಿಕ್ಷಕರ ಸಮಸ್ಯೆ. ಹಿಂದಿ ಶಿಕ್ಷಕರ ಸಮಸ್ಯೆ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಈಡೇರಿಸಲು ಮನವಿ ನೀಡಲಾಯಿತು.