ಅಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನ ಮನೆಗೆ ಅರುಣ ಶಹಾಪುರ ಭೇಟಿ

Must Read

ಸಿಂದಗಿ: ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಿರುಕುಳಕ್ಕೆ ತಾಲೂಕಿನ ಸಾಸಾಬಾಳ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಬಸವರಾಜ ನಾಯ್ಕಲ್ ಅವರು ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಸ್ವಗ್ರಾಮ ಕೊರವಾರದ ಮನೆಗೆ ಮಾಜಿ ವಿಧಾನ ಪರಿಷತ್ ಸದಸ್ಯ  ಅರುಣ ಶಹಾಪುರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿ, ಒಬ್ಬ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ಶಿಕ್ಷಣ ಕ್ಷೇತ್ರದಲ್ಲಿ ಆತಂಕದ ವಾತಾವರಣವನ್ನು ನಿರ್ಮಾಣವಾಗಿದೆ. ಒಬ್ಬ ಶಿಕ್ಷಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಎದುರಿಸುವಂತ ಸವಾಲುಗಳನ್ನು ಅವರ ಡೆತ್ ನೋಟ್‍ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವದು ವಿಪರ್ಯಾಸ ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಸರಕಾರಕ್ಕೆ ಆಗ್ರಹ ಮಾಡುತ್ತೇನೆ.

ಈ ಘಟನೆ ಸರಕಾರವೇ ತಲೆ ತಗ್ಗಿಸುವಂತಾಗಿದೆ. ಒಂದು ಶಾಲೆಯಲ್ಲಿ ಹಲವಾರು ಶಿಕ್ಷಕರು ಚಾರ್ಜ ತೆಗೆದುಕೊಂಡರೂ ಸಹ ವ್ಯವಸ್ಥೆ ಸರಿಯಾಗದಿದ್ದರೆ ಅಂತಹ ಮೇಲಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸಬೇಕು ಅಲ್ಲದೆ ರಜಿಸ್ಟರಗಳನ್ನು ಬರೆಯದೆ ಮುಂದುವರೆಸಿದ್ದು ಆತಂಕಕಾರಿ ವಿಷಯ.

ಶಿಕ್ಷಣ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕು. ನಾನೂ ಕೂಡ ನೊಂದ ಕುಟುಂಬಕ್ಕೆ ಸರಕಾರದಿಂದ ಬರುವಂಥ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಸುತ್ತೇನೆ ಎಂದು ಭರವಸೆ ನೀಡಿದರು.

ಮೃತ ಶಿಕ್ಷಕರ ಕುಟುಂಬಸ್ಥ ನಿವೃತ್ತ ಶಿಕ್ಷಕ ರುದ್ರಗೌಡ ಬಿರಾದಾರ ಮಾತನಾಡಿ, ಈಗಿನ ಶಿಕ್ಷಣ ಬರೀ ಕಾಗದ ಪತ್ರಗಳಲ್ಲಿ ತತ್ತಿ, ಬಾಳೆಹಣ್ಣು, ಬಿಸಿಊಟದಲ್ಲಿ ನಡೆಯುತ್ತಿವೆ ವಿನಹ ಒಬ್ಬ ಮೇಲಾಧಿಕಾರಿ ಬಂದು ಯಾವ ಶಿಕ್ಷಣದಲ್ಲಿ ಕೊರತೆಯಾಗಿದೆ ಶೈಕ್ಷಣಿಕವಾಗಿ ಹಿಂದೆ ಬಿಳಲು ಕಾರಣವೇನು ಎನ್ನುವ ವಿಚಾರಣೆ ನಡೆಯುತ್ತಿಲ್ಲ. ಇದರಿಂದ ಮೇಲಧಿಕಾರಿಗಳಿಂದ ಶಿಕ್ಷಕರು ಭ್ರಷ್ಟಾಚಾರ ಕ್ಕೆ ಇಳಿಯುವಂತಾಗಿದೆ ಅದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಶಾಸಕರು ದುಡ್ಡು ಮಾಡುವ ಪ್ರವೃತ್ತಿಯಿಂದ ಹೊರಬಂದರೆ ಮಾತ್ರ ಇಂತಹ ವ್ಯವಸ್ಥೆಗೆ ಕಡಿವಾಣ ಬೀಳಬಹುದು. ಒಬ್ಬ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಸ್ಥಳೀಯ ಶಾಸಕರು ಭೇಟಿ ನಿಡದಿರುವದು ಅಧಿಕಾರಿಯನ್ನು ಉಳಿಸುವಂಥ ಹುನ್ನಾರ ನಡೆದಂತಾಗಿದೆ ಇಂತಹ ವ್ಯವಸ್ಥೆಯನ್ನು ಸಾರ್ವಜನಿಕ ವಲಯ ಖಂಡಿಸಲೇಬೇಕು ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳಿಗೆ ತಕ್ಕ ಶಿಕ್ಷೆಯಾದರೆ ಇಂತಹ ಅಮಾಯಕ ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಮುಂದೆ ನಡೆಯುವ ಭ್ರಷ್ಟಾಚಾರ ಕ್ಕೆ ಕಡಿವಾಣ ಬಿದಂತಾಗುತ್ತದೆ ಶಿಕ್ಷಣ ಕ್ಷೇತ್ರವನ್ನು ಸುಧಾರಣೆ ಮಾಡಿ ಎಂದು ಮನವಿ ಮಾಡಿಕೊಂಡರು.

ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ,ಕುರುಡೆ ಮಾತನಾಡಿ, ಹಿಂದೆ ಇದ್ದ ಮುಖ್ಯಶಿಕ್ಷಕ ಬಜಂತ್ರಿ ಹಾಗೂ ಜಿ.ಎನ್ ಪಾಟೀಲ ಅವರು ಸುಮಾರು 10 ವರ್ಷಗಳಿಂದ ಯಾವುದೇ ರಜಿಸ್ಟರಗಳನ್ನು ಬರೆಯದೇ ಅಧಿಕಾರಿಗಳನ್ನು ಊರಿನ ಪುಡಾರಿಗಳನ್ನು ಮ್ಯಾನೇಜ್ ಮಾಡುತ್ತ ಹೋಗಿದ್ದಾರೆ ನಂತರ ಪ್ರಭಾರಿ ಮುಖ್ಯಶಿಕ್ಷಕರೆಂದು ಬಸವರಾಜ ನಾಯ್ಕಲ್ ಅವರಿಗೆ ಜಾರ್ಜ ಕೊಡಿಸಿ ಸತತ ಮೂರು ತಿಂಗಳಿಂದ ಮೇಲಿಂದ ಮೇಲೆ ಟಾರ್ಚರ ನೀಡುತ್ತ ಬಂದಿದ್ದಾರೆ ಅವರು ನಮ್ಮ ಮುಂದೆ ಹೇಳಿಲ್ಲ ಆದಾಗ್ಯೂ ಒಂದು ತಿಂಗಳ ಹಿಂದೆ ಸ್ವಲ್ಪ ನಮ್ಮ ಗಮನಕ್ಕೆ ಬಂದಿದ್ದರಿಂದ ಮುಖ್ಯಶಿಕ್ಷಕ ಚಾರ್ಜ ಬೇಡವೆಂದು ಅರ್ಜಿ ಸಲ್ಲಿಸುವಂತೆ ಹೇಳಲಾಗಿತ್ತು ಆದಾಗ್ಯೂ ಮೇಲಾಧಿಕಾರಿಗಳಿಂದ ನೀಡುವ ತೊಂದರೆಯನ್ನು ಸಹಿಸಲಿಕ್ಕಾಗದೆ ಮನನೊಂದು ನೇಣಿಗೆ ಶರಣಾಗಿದ್ದಾರೆ ಇಂತಹ ಘಟನೆ ಮತ್ಯಾವ ಶಿಕ್ಷಕರಿಗೆ ಬರಬಾರದು ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಕುಲಕುಶವಾಗಿ ಪರಿಶೀಲಿಸಿ ಅಪರಾಧಿಗಳನ್ನು ಯಾವುದೇ ಮುಲಾಜಿಲ್ಲದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ರವಿ ಹೊಸಮನಿ, ಪಿ.ಎಸ್.ಅಗ್ನಿ, ಅರವಿಂದ ತೇಲಿ, ಎಸ್.ಜಿ.ಶಹಾಪುರ, ಭೀಮಾ ಯುನಿರ್ವಸೆಲ್ ಸ್ಕೂಲಿನ ನಿರ್ದೇಶಕರ ಭೀಮಾಶಂಕರ ತಾರಾಪುರ, ಕೊರವಾರ ಗ್ರಾಮದ ಶಾಂತಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.

Latest News

ಸತ್ಯ ಹೇಳಿದ ನಿತ್ಯ ಸ್ಮರಣೀಯ ಡಾ ಎಂ ಎಂ ಕಲಬುರ್ಗಿ ಗುರುಗಳು

ಕನ್ನಡ ಸಾರಸ್ವತಲೋಕದ ಬಹುದೊಡ್ಡ ಕೊಡುಗೆ, ಆಸ್ತಿ ವಿಮರ್ಶಕ ಸಂಶೋಧಕ ದೇಸಿ ಸಾಹಿತಿ ಚಿಂತಕ ಡಾ ಎಂ ಎಂ ಕಲಬುರ್ಗಿ ಸರ್ ಅವರು ಬದುಕಿನ ಕೊನೆವರೆಗೂ ಸತ್ಯಕ್ಕೆ...

More Articles Like This

error: Content is protected !!
Join WhatsApp Group