ಸಚಿವ ರಹೀಂ ಖಾನ್ ಭಾವಚಿತ್ರ ಇದ್ದ ಬ್ಯಾನರ್ ಕಿತ್ತು ಬಿಸಾಡಿದ ದಲಿತ ಮುಖಂಡ.
ಬೀದರ – ಬ್ಯಾನರ್ ಕಟ್ಟುವ ವಿಷಯದ ಕುರಿತಂತೆ ಬಳ್ಳಾರಿಯಲ್ಲಿ ನಡೆದ ಸಂಘರ್ಷ ಇನ್ನೂ ಹಸಿರಾಗಿರುವಾಗಲೇ ಬೀದರನಲ್ಲೂ ಬ್ಯಾನರ್ ಗಲಾಟೆಯೊಂದು ನಡೆದಿದ್ದು ದಲಿತ ಪರ ಸಂಘಟನೆ ಮತ್ತು ರಹೀಂಖಾನ್ ನಡುವೆ ಬ್ಯಾನರ್ ಜಟಾಪಟಿ ನಡೆದಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬ್ಯಾನರ್ ಮೇಲೆಯೇ ಸಚಿವ ರಹೀಂಖಾನ್ ಬ್ಯಾನರ್ ಹಾಕಿದ್ದಕ್ಕಾಗಿ ಆಕ್ರೋಶ ವ್ಯಕ್ತವಾಗಿದ್ದು ಆರ್.ಕೆ ಫೌಂಡೇಷನ್ ನಿಂದ ಪುಟ್ ಬಾಲ್ ಟೂರ್ನಮೆಂಟ್ ಬಗ್ಗೆ ಹಾಕಿದ್ದ ಬ್ಯಾನರ್ ದಲಿತ ಮುಖಂಡರು ಕಿತ್ತು ಬಿಸಾಡಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಪ್ರಜಾಪ್ರಭುತ್ವದ ಉಳಿವಿಗಾಗಿ ಬೃಹತ್ ಬಹಿರಂಗ ಸಭೆಯ ಬ್ಯಾನರ್ ಹಾಕಿದ್ದ ದಲಿತ ಪರ ಸಂಘಟನೆಗಳು.ಅದರ ಮೇಲೆಯೇ ರಹೀಂ ಖಾನ್ ಬ್ಯಾನರ್ ಹಾಕಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪದೇ ಪದೇ ಸಚಿವ ರಹೀಂಖಾನ್ ಈ ರೀತಿ ಮಾಡುತ್ತಿದ್ದಾರೆ.ಇದರಿಂದಲೇ ಗೋತ್ತಾಗುತ್ತದೆ ಅಂಬೇಡ್ಕರ್ ಮೇಲೆ ಸಚಿವ ರಹೀಂಖಾನ್ ಗೆ ಎಷ್ಟು ಪ್ರೀತಿ ಇದೆಯಂದು. ಇದೇ ರೀತಿ ಮುಂದುವರಿದರೆ ಮುಂದಾಗುವ ಅನಾಹುತಕ್ಕೆ ಸಚಿವ ರಹೀಂ ಖಾನರೇ ನೇರ ಹೊಣೆ ಎಂದು ದಲಿತ ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.

