ಬಸವ ಅನುಯಾಯಿಗಳು ಧರ್ಮದ ಭಕ್ತರಾಗಬೇಕೆ ಹೊರತು ಪೀಠ ಮಠಗಳದ್ದಲ್ಲ

Must Read

ವರ್ಗ ವರ್ಣ ಆಶ್ರಮ ಲಿಂಗ ಭೇದವಿಲ್ಲದ ಸಾಂಸ್ಥಿಕರಣವಲ್ಲದ ಜಗದ ಏಕೈಕ ಧರ್ಮ ಅದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವಾಗಿದೆ.
ಬಸವಣ್ಣನವರ ಹೆಸರು ಹೇಳಿ ಸುಲಿಗೆ ಮಾಡಿ ಬಸವಣ್ಣನವರ ತತ್ವಗಳನ್ನು ಜಡಗೊಳಿಸಿದ ಕೀರ್ತಿ ನಮ್ಮ ಕಾವಿಧಾರಿಗಳಿಗಿದೆ . ಎಲ್ಲ ಮಠಾಧೀಶರು ಕರ್ಮಠರಲ್ಲ .
ಚಲನ ಶೀಲತೆ ಕಳೆದುಕೊಂಡು ಮಠ ಆಶ್ರಮ ಮಂಟಪಗಳಲ್ಲಿ ದಾಸ್ಯತ್ವವನ್ನು ಬೋಧಿಸಿದ್ದರಿಂದಲೇ ಇಂದು ನಮ್ಮಲ್ಲಿ ಸ್ಪಷ್ಟತೆ ಬಂದಿಲ್ಲ .

ವೀರಶೈವ ಲಿಂಗಾಯತ -ವಿವಾದ ಕಳೆದ ಐದು ದಶಕದಿಂದ ಹೆಚ್ಚಿದೆ . ಅಖಿಲ ವೀರಶೈವ ಮಹಾಸಭೆ ಒಂದು ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಿಲ್ಲ .
1912 ರಲ್ಲಿ ಅರಟಾಳ ರುದ್ರಗೌಡರು ನಿಪ್ಪಾಣಿಯಲ್ಲಿ ಜರುಗಿದ ವೀರಶೈವ ಮಹಾಸಭೆಯ ಉದ್ಧೇಶಿಸಿ ಬಸವಣ್ಣ ಲಿಂಗಾಯತ ಧರ್ಮ ಮತ ಸ್ಥಾಪಕ ಎಂದಿದ್ದಾರೆ.
1940 ರಲ್ಲಿ ಎಂ ಎಸ ಸರ್ದಾರ ಅವರು ಇದನ್ನು ಅಖಿಲ ಭಾರತ ಲಿಂಗಾಯತ ಮಹಾಸಭೆ ಮಾಡಲು ನಿರ್ಣಯ ಅಂಗೀಕಾರಗೊಳಿಸಿದರು. ಆದರೆ ಅಂಗೀಕಾರ ಅನುಷ್ಠಾನಗೊಳ್ಳಲಿಲ್ಲ.

ಗುಲಾಮಗಿರಿಯನ್ನು ಪ್ರೋತ್ಸಾಹಿಸುವದರಿಂದಲೇ ಬಸವ ಭಕ್ತರಿಗೆ ಇನ್ನು ಸ್ವತಂತ್ರತೆ ಕಲ್ಪನೆ ಬಂದಿಲ್ಲ. ಕೆಲವು ಮಠ ಹೊರತು ಪಡಿಸಿದರೆ ವಿರಕ್ತ ಪರಂಪರೆಯಲ್ಲೂ ವೈದಿಕತೆ ಅಳವಡಿಸಿಕೊಂಡಿವೆ.ಯಾವುದೇ ಒಂದು ಹೋರಾಟ ಚರ್ಚೆ ಆರೋಗ್ಯಕರವಾಗಿರಬೇಕಾದರೆ ಅಲ್ಲಿ ಅನಗತ್ಯ ಟೀಕೆ ಆರೋಪ ಪ್ರತ್ಯಾರೋಪಗಳು ಇರಬಾರದು. ಗುರುಗಳಾದವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು ಮತ್ತು ತಮ್ಮ ಅನುಯಾಯಿಗಳಿಗೆ ಬುದ್ಧಿ ವಿವೇಕತನವನ್ನು ಹೇಳಬೇಕು.

ಪರಸ್ಪರ ಕದನ ಪ್ರತಿಭಟನೆಯಿಂದಾಗಿ ಲಿಂಗಾಯತ ಬಸವ ಭಕ್ತರ ಮನಸ್ಸುಗಳು ತಲ್ಲಣಗೊಂಡಿವೆ. ಅನ್ಯ ಧರ್ಮಿಯರ ಮುಂದೆ ಅಪಹಾಸ್ಯಕ್ಕೆ ಗುರಿಯಾಗಬಾರದು.ಈ ಕಾರಣದಿಂದ ಶ್ರೇಣೀಕೃತವಲ್ಲದ ಲಿಂಗಾಯತ ಧರ್ಮದ ಅಗತ್ಯವಿದೆ .ನಾವು ವಚನ ಅಧ್ಯಯನಶೀಲರಾಗಬೇಕು ,ಬಸವಣ್ಣನೇ ನಮ್ಮ ಗುರುವಾಗಬೇಕು ನಮ್ಮ ಅರಿವಿನ ಜ್ಯೋತಿಯಾಗಬೇಕು. ಬಸವ ಅನುಯಾಯಿಗಳು ಧರ್ಮದ ಭಕ್ತರಾಗಬೇಕೆ ಹೊರತು ಪೀಠ ಮಠಗಳದ್ದಲ್ಲ.

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group