- Advertisement -
ಬೀದರ – ಬಸವಕಲ್ಯಾಣದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಾಲು ಮುಟ್ಟಿ ಶರಣಾದ ಶರಣು ಸಲಗರ.
ಅನುಭವ ಮಂಟಪ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಕಾಲಿಗೆ ನಮಸ್ಕರಿಸಿದ ಶಾಸಕ ಶರಣು ಸಲಗರ ಅವರು, ಅನುಭವ ಮಂಟಪದ ಕಾರ್ಯ ಬೇಗ ಮುಗಿಸುವಂತೆ, ಕಲ್ಯಾಣದ ಅಭಿವೃದ್ಧಿ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಶಾಸಕರ ಮನವಿಯನ್ನು ಪುರಸ್ಕರಿಸಿದ ಖಂಡ್ರೆ ಎಲ್ಲ ಬೇಡಿಕೆಗಳಿಗೆ ಓಕೆ ಎಂದರು.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ