- Advertisement -
ಬೀದರ: ಎಲ್ಲಿ ನೋಡಿದಲ್ಲಿ ಒರಿಜಿನಲ್ ಚಾಯಿಸ್, ಓಟಿ ವಿಸ್ಕಿ ಬ್ರಾಂಡ್ ನ ಪ್ಯಾಕೆಟ್ ಗಳು ಬೀಯರ್ ಬಾಟಲಿಗಳು!
ಚುನಾವಣೆಯಲ್ಲಿ ಹಂಚಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಪೊಲೀಸರು ಬೀದರ್ ತಾಲೂಕಿನ ಕಮಠಾಣ ಗ್ರಾಮದ ಬಳಿ ದಾಳಿ ನಡೆಸಿ ಜಪ್ತಿ ಮಾಡಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಅಪಾರ ಪ್ರಮಾಣದ ಮದ್ಯ ಜಪ್ತಿಯಾಗಿದ್ದು ಇದೇ ಮೊದಲು ಎನ್ನಲಾಗಿದ್ದು, ಈವರೆಗೆ 40ಕ್ಕೂ ಅಧಿಕ ಪ್ರಕರಣಗಳನ್ನು ಅಬಕಾರಿ ಪೊಲೀಸರು ದಾಖಲು ಮಾಡಿದ್ದಾರೆ ಒಟ್ಟು 19 ಬೈಕ್ ಹಾಗೂ 6 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
- Advertisement -
1 ಸಾವಿರ 50 ಲೀಟರ್ ಮದ್ಯ, 220 ಲೀಟರ್ ಬಿಯರ್ ಜಪ್ತಿ ಮಾಡಿದ ಅಬಕಾರಿ ಪೊಲೀಸರು ಒಟ್ಟು 47 ಲಕ್ಷ 57 ಸಾವಿರ ಮೌಲ್ಯದ ಮದ್ಯ ಜಪ್ತಿ ಮಾಡಿದಂತಾಗಿದೆ
ಜಿಲ್ಲೆಯ ಗಡಿಗಳಲ್ಲಿ ಅಬಕಾರಿ ಇಲಾಖೆ ಪೊಲೀಸರಿಂದ ಒಟ್ಟು 5 ಚೆಕ್ ಪೊಸ್ಟ್ ಗಳು ನಿರ್ಮಾಣ ಮಾಡಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ