Bidar: ವಿದ್ಯುತ್ ಶಾರ್ಟ್ ಸರ್ಕಿಟ್; ಮನೆಗಳಲ್ಲಿನ ವಿದ್ಯುತ್ ಪರಿಕರ ನಾಶ

Must Read

ಬೀದರ: ಹೈ ವೋಲ್ಟೆಟ್ ವಿದ್ಯುತ್ ಇರುವ ತಂತಿ ಟ್ರಾನ್ಸ್‌‌ಫಾರ್ಮ‌ರ್‌ಗೆ ತಗುಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು 15 ಮನೆಗಳಲ್ಲಿನ ವಿದ್ಯುತ್ ಪರಿಕರಗಳಿಗೆ ಹಾನಿಯುಂಟಾಗಿರುವ ಪ್ರಕರಣ ನಡೆದಿದೆ.

ಬೀದರ ತಾಲೂಕಿನ ಹೊನ್ನಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಹಲವು ಮನೆಗಳಲ್ಲಿನ ಫ್ಯಾನ್, ಟಿವಿ, ಪ್ರಿಡ್ಜ್ ಸೇರಿದಂತೆ ಹಲವು ವಸ್ತುಗಳಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿಯಾಗಿದೆ. ಅಷ್ಟೇ ಅಲ್ಲದೆ ಹಾಸಿಗೆ ದಿಂಬುಗಳೂ ಸುಟ್ಟು ಕರಕಲಾಗಿವೆ.

೧೧ ಸಾವಿರ ವ್ಯಾಟ್‌ನ ವಿದ್ಯುತ್ ತಂತಿ ೨೫೦ ವ್ಯಾಟ್‌ನ ಟ್ರಾನ್ಸ್‌ಫಾರ್ಮರ್ ಗೆ ತಗುಲಿ ಅನಾಹುತ ಸಂಭವಿಸಿದೆ. ಹಲವು ಬಾರಿ ತಂತಿ ಸರಿಪಡಿಸುವಂತೆ ಮನವಿ ಮಾಡಿಕೊಂಡರೂ ಕ್ಯಾರೆ ಎನ್ನದ  ವಿದ್ಯುತ್ ಅಧಿಕಾರಿಗಳಿಂದಾಗಿ ಈ ಅನಾಹುತ ಸಂಭವಿಸಿದೆಯೆಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group