Bidar: ಭಾರೀ ಮಳೆ; ಶಾಲೆಯ ಒಳಗೆ ನುಗ್ಗಿದ ಮಳೆ ನೀರು

0
285

ಬೀದರ –  ಗಡಿ ಬೀದರ್ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯ ನೀರು ಹಲವು ಸರಕಾರಿ ಶಾಲೆ ಒಳಗೆ ನುಗ್ಗಿ ಶಾಲೆಗಳು ಜಲಾವೃತವಾಗಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಭಾಲ್ಕಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ಯಾಲಹಳ್ಳಿ ಗ್ರಾಮದಲ್ಲಿ ಶಾಲೆ ಕೊಠಡಿ ಒಳಗೆ ಮಳೆ ನೀರು ನುಗ್ಗಿದ್ದು ಶಾಲೆಗೆ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದಾರೆ.

ಬ್ಯಾಲಹಳ್ಳಿ ಗ್ರಾಮ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರ ಕೂಡ ಆಗಿದೆ.

ಇನ್ನೊಂದು ಕಡೆ ಹುಮನಾಬಾದ ಕ್ಷೇತ್ರದ ಸಿದ್ಧಬಂದಗಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತಗೊಂಡಿದೆ. ಸರ್ಕಾರಿ ಶಾಲೆ ಒಳಗೆ ನುಗ್ಗಿದ ಮಳೆ ನೀರು ಹಿನ್ನೆಲೆಯಲ್ಲಿ ಶಾಲೆಯ ಆವರಣ ಕೆರೆಯಂತಾಗಿದೆ.

ಸಿಂದಬಂದಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿ ಮಕ್ಕಳು ಮತ್ತು ಶಿಕ್ಷಕರು ಶಾಲೆ ಒಳಗೆ ಹೋಗದ ಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನೀರು ಶಾಲೆ ಒಳಗೆ ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಹೇಗೆ ಸಾದ್ಯ ಗ್ರಾಮೀಣ ಭಾಗದಲ್ಲಿ ಬಡವರ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ. ಸರ್ಕಾರಿ ಶಾಲೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಮಕ್ಕಳು ಶಾಲೆಗೆ ಬರುವುದು ಹೇಗೆ ಸಾದ್ಯ ಅಂತೀರಾ ಪಾಲಕರು. ಬಡವರ ಮಕ್ಕಳ ಕಲಿಕೆಯ ವಿದ್ಯಾಭ್ಯಾಸ ಮಾಡಲು ಹೇಗೆ ಸಾಧ್ಯ.ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಈ ಶಾಲೆಯ ಕಡೆ ಗಮನ ಹರಿಸಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸುಗಮ ವವಸ್ಥೆ ಮಾಡಿಕೊಡಬೇಕು ಎಂದು ಪಾಲಕರು ಆಗ್ರಹ ಮಾಡಿದ್ದಾರೆ.


ವರದಿ : ನಂದಕುಮಾರ ಕರಂಜೆ, ಬೀದರ