ಬೀದರ: ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿ ಎಟಿಎಮ್ ದೋಚುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ಬೀದರ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ರಾಜ್ಯದ 8 ಕಡೆ ಹಾಗೂ ನೆರೆರಾಜ್ಯದ 4 ಕಡೆ ಎಟಿಎಮ್ ದೋಚಿದ್ದ ಖದೀಮರ ಗ್ಯಾಂಗಿನ ಮೂವರನ್ನ ಬಂಧಿಸಿ, 12 ಎಟಿಎಮ್ ಕಳ್ಳತನವನ್ನು ಬೀದರ್ ಪೊಲೀಸರು ಭೇದಿಸಿದ್ದಾರೆ.
ಇತ್ತೀಚೆಗೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್‌ನಲ್ಲಿ ಎಟಿಎಮ್ ದೋಚಿದ್ದ ಕಳ್ಳತನದ ವೇಳೆ ಕಾರ್ ನಂಬರ ಬದಲಿಸಿ ಅಲೆಯುತ್ತಿದ್ದರು. ಬೀದರ ಪೊಲೀಸರು ಅವರನ್ನು ಹುಮನಾಬಾದ್ ಆರ್ ಟಿ ಓ ಕಚೇರಿ ಹತ್ತಿರ ಬಂಧಿಸಿದರು
ಹರಿಯಾಣ ರಾಜ್ಯದ ಶಾಹೀದ್ (45),ಅಲೀಂ (26), ಇಲಿಯಾಸ್ (45)ಬಂಧಿತ ಆರೋಪಿಗಳು. ಇವರು 12 ಎಟಿಎಮ್‌ಗಳಿಂದ 1 ಕೋಟಿ 58 ಲಕ್ಷ ಹಣ ದೋಚಿದ್ದರು ಬಂಧಿತ ಆರೋಪಿಗಳಿಂದ 9 ಲಕ್ಷ 50 ಸಾವಿರ ಹಣ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ